ಆಟೋ ಗ್ಯಾಸ್ ದರ 15 ರು. ಕಡಿತ: ಮೊಯ್ಲಿ
ಆಟೋ ಚಾಲಕರಿಗೊಂದು ಸಿಹಿ ಸುದ್ದಿ. ಆಟೋ ಗ್ಯಾಸ್ ದರ ಪ್ರತಿ ಕೆಜಿಗೆ 15 ರುಪಾಯಿ ಕಡಿತಗೊಳಿಸುವುದಾಗಿ ಕೇಂದ್ರ...
ನವದೆಹಲಿ: ಆಟೋ ಚಾಲಕರಿಗೊಂದು ಸಿಹಿ ಸುದ್ದಿ. ಆಟೋ ಗ್ಯಾಸ್ ದರ ಪ್ರತಿ ಕೆಜಿಗೆ 15 ರುಪಾಯಿ ಕಡಿತಗೊಳಿಸುವುದಾಗಿ ಕೇಂದ್ರ ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯ್ಲಿ ಅವರು ಸೋಮವಾರ ಹೇಳಿದ್ದಾರೆ.
ಹೊಸವರ್ಷದಂದೇ ಆಟೋ ಚಾಲಕರಿಗೆ ಶಾಕ್ ನೀಡಿದ್ದ ಸರ್ಕಾರ, ಜ.1ರಂದು ಆಟೋ ಮತ್ತು ಕಾರ್ಗಳಿಗೆ ಬಳಕೆ ಮಾಡುವ ಗ್ಯಾಸ್ ದರವನ್ನು ಪ್ರತಿ ಲೀಟರ್ಗೆ 11.13ರಷ್ಟು ಹೆಚ್ಚು ಮಾಡಿತ್ತು. ಇದಕ್ಕೆ ಆಟೋ ಚಾಲಕರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು.
ಕಳೆದ ಶನಿವಾರ ಆಟೋ ಗ್ಯಾಸ್ ದರ ಇಳಿಕೆಗೆ ಆಗ್ರಹಿಸಿ ಆಟೋ ಚಾಲಕರ ಭಾರಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನಾ ಮೆರವಣಿಗೆಯಲ್ಲಿ ಸುಮಾರು 5 ಸಾವಿರ ಆಟೋ ಚಾಲಕರು ಭಾಗವಹಿಸಿದ್ದರು