ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗುಲ್ಬರ್ಗಾ ಶೂಟೌಟ್ ನಕಲಿ: ತನಿಖೆಗೆ ಮುನ್ನಾ ಪತ್ನಿ ಆಗ್ರಹ

ಗುಲ್ಬರ್ಗಾದ ಶೂಟೌಟ್ ಪ್ರಕರಣವನ್ನು ನಕಲಿ ಎನ್‌ಕೌಂಟರ್ ಎಂದು ಆರೋಪಿಸಿರುವ,..

Lingaraj Badiger
Updated On : 3 Feb 2014, 2:15 am

ಗುಲ್ಬರ್ಗಾ: ಗುಲ್ಬರ್ಗಾದ ಶೂಟೌಟ್ ಪ್ರಕರಣವನ್ನು ನಕಲಿ ಎನ್‌ಕೌಂಟರ್ ಎಂದು ಆರೋಪಿಸಿರುವ, ದಾಳಿಯಲ್ಲಿ ಹತನಾದ ಭೂಗತ ಪಾತಕಿ ಮುನ್ನಾ ಪತ್ನಿ ಗೌಸಿಯಾ ಬೇಗಂ, ಪತಿಯ ಸಾವಿನ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಸೋಮವಾರ ಆಗ್ರಹಿಸಿದ್ದಾಳೆ.

ಈ ಸಂಬಂಧ ಇಂದು ಗುಲ್ಬರ್ಗಾದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೌಸಿಯಾ, ನನ್ನ ಪತಿ ಮುನ್ನಾ ಕೊಲೆ ಸುಲಿಗೆಗಳಲ್ಲಿ ಭಾಗಿಯಾಗಿರಲಿಲ್ಲ. ನಾವು ಇಬ್ಬರೂ ಬಟ್ಟೆ ವ್ಯಾಪಾರ ಮಾಡಿಕೊಂಡು ಮಕ್ಕಳೊಂದಿಗೆ ಕಡುಬಡತನದಲ್ಲಿ ಜೀವನ ನಡೆಸುತ್ತಿದ್ದೇವು. ಆತನ ವಿರುದ್ಧ ಪೊಲೀಸರು ಸುಳ್ಳು ಆರೋಪ ಮಾಡಿದ್ದಾರೆ. ಮುನ್ನಾ ಮೇಲಿರುವ ಆರೋಪಗಳನ್ನು ಪೊಲೀಸರು ಸಾಬೀತುಪಡಿಸಲಿ. ಸಾಬೀತಾದರೆ ನಾನೂ ಶಿಕ್ಷೆ ಅನುಭವಿಸಲು ಸಿದ್ಧ ಎಂದಿದ್ದಾಳೆ.

ಪೊಲೀಸರ ವೈಯಕ್ತಿಕ ದ್ವೇಷಕ್ಕೆ ನನ್ನ ಪತಿ ಬಲಿಯಾಗಿದ್ದಾರೆ. ನನ್ನ ಪತಿ ಬಳಿ ಯಾವುದೇ ಗನ್ ಇರಲಿಲ್ಲ. ಆತನ ಮೇಲೆ ದಿಢೀರ್ ದಾಳಿ ಮಾಡಿ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ ಎಂದು ಗೌಸಿಯಾ ಆರೋಪಿಸಿದ್ದಾರೆ. ಅಲ್ಲದೆ ಶೂಟೌಟ್ ಆದ ನಂತರವೂ ನನ್ನ ಪತಿ ಜೀವಂತವಾಗಿದ್ದರು. ಆದರೆ ಪೊಲೀಸರು ಬದುಕಿಸುವ ಪ್ರಯತ್ನ ಮಾಡಲಿಲ್ಲ ಎಂದು ಸಹ ಗೌಸಿಯಾ ಪೊಲೀಸರು ವಿರುದ್ಧ ದೂರಿದ್ದಾರೆ.

ಪಿಎಸ್‌ಐ ಮಲ್ಲಿಕಾರ್ಜುನ ಬಂಡೆಗೆ ತಗಲಿರುವ ಗುಂಡು ಪೊಲೀಸರ ಗುಂಡಿರಬಹುದು ಎಂದಿರುವ ಗೌಸಿಯಾ, ಮುನ್ನಾ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಿ ನನಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement