ದೆಹಲಿಯಲ್ಲಿ ಜನಲೋಕಪಾಲ್ ವಿಧೇಯಕ ಅಂಗೀಕಾರ
ದೆಹಲಿ ಸಚಿವ ಸಂಪುಟ ಸಭೆಯಲ್ಲಿ ಜನಲೋಕಪಾಲ್ ವಿಧೇಯಕ ಸೋಮವಾರ ಅಂಗೀಕಾರವಾಗಿದೆ...
ನವದೆಹಲಿ: ದೆಹಲಿ ಸಚಿವ ಸಂಪುಟ ಸಭೆಯಲ್ಲಿ ಜನಲೋಕಪಾಲ್ ವಿಧೇಯಕ ಸೋಮವಾರ ಅಂಗೀಕಾರವಾಗಿದೆ.
ಇಂದು ನಡೆದ ದೆಹಲಿ ಸಚಿವ ಸಂಪುಟ ಸಭೆಯಲ್ಲಿ ವಿಧೇಯಕವನ್ನು ಅಂಗೀಕಾರಮಾಡಲಾಗಿದೆ ಎಂದು ಸಚಿವ ಮನಿಶ್ ಸಿಸೋಡಿಯಾ ಹೇಳಿದ್ದಾರೆ.
ಸಭೆಯ ನಂತರ ಮಾತನಾಡಿದ ಅವರು, ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜನಲೋಕಪಾಲ್ ಮಸೂದೆಗೆ ಅಂಗಿಕಾರ ದೊರಕಿದೆ ಎಂದಿದ್ದಾರೆ.
ಫೆ 13 ರಿಂದ ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ಅಧಿವೇಶನದಲ್ಲಿ ಜನಲೋಕಪಾಲ್ ವಿಧೇಯಕ ಮಂಡಿಸಲು ನಿರ್ಧರಿಸಲಾಗಿದೆ ಎಂದ ಅವರು, ಜನಲೋಕಪಾಲ್ ವಿಧೇಯಕವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.