ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಿಡೋ ತಾನಿಯ ಹತ್ಯೆ: ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ

ಅರುಣಾಚಲ ಪ್ರದೇಶದ ಶಾಸಕ ನಿಡೋ ಪಲ್ಲವಿ ಅವರ ಪುತ್ರ ನಿಡೋ ತಾನಿಯ ಹತ್ಯೆ ಪ್ರಕರಣದ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ...

Mainashree
Updated On : 3 Feb 2014, 3:35 am

ನವದೆಹಲಿ: ಅರುಣಾಚಲ ಪ್ರದೇಶದ ಶಾಸಕ ನಿಡೋ ಪಲ್ಲವಿ ಅವರ ಪುತ್ರ ನಿಡೋ ತಾನಿಯ ಹತ್ಯೆ ಪ್ರಕರಣದ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಮತ್ತು ದೆಹಲಿ ಪೊಲೀಸರಿಗೆ ದೆಹಲಿ ಹೈಕೋರ್ಟ್ ಸೂಚಿಸಿದೆ.

ನ್ಯಾಯಾಮೂರ್ತಿ ಎನ್.ವಿ ರಾಮನ್ ಮತ್ತು ರಾಜಿವ್ ಸಹೈ ಎನ್ಡ್‌ಲಾ ಅವರನ್ನೊಳಗೊಂಡ ಪೀಠ ಪ್ರರಣದ ಸಂಬಂಧ ವರದಿ ಸಲ್ಲಿಸುವಂತೆ ಕೇಂದ್ರ ಮತ್ತು ದೆಹಲಿ ಪೊಲೀಸರಿಗೆ ಆದೇಶಿಸಿದೆ.

ನಿಡೋ ತಾನಿಯ ಹತ್ಯೆ ಪ್ರಕರಣ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಪೂರ್ಣ ಮಾಹಿತಿಯನ್ನೊಳಗೊಂಡ ವರದಿ ಸಲ್ಲಿಸಬೇಕು ಹಾಗೂ ದೆಹಲಿಯ ಈಶಾನ್ಯ ದಿಕ್ಕಿನಿಂದ ವಲಸೆ ಬರುವ ಜನರಿಗೆ ಯಾವ ರೀತಿ ರಕ್ಷಣೆ ನೀಡಲಾಗುತ್ತಿದೆ ಎಂಬುದರ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಬೇಕು ಎಂದು ನ್ಯಾಯಾಪೀಠ ಹೇಳಿದೆ.

ದೆಹಲಿ ಹೈಕೋರ್ಟ್ ನಿಡೋ ತಾನಿಯ ಹತ್ಯೆ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದೆ.

ಆಫ್ರಿಕಾ ಮತ್ತು ಈಶಾನ್ಯ ಭಾರತೀಯರೇ ಹೆಚ್ಚಾಗಿ ವಾಸಿಸುತ್ತಿರುವ ದಕ್ಷಿಣ ದೆಹಲಿಯ ಲಜಪತ್ ನಗರಕ್ಕೆ ಕಳೆದ ಜನವರಿ 29ರಂದು ತನ್ನ ಸ್ನೇಹಿತನನ್ನು ಹುಡುಕಿಕೊಂಡು ನಿಡೋ ತಾನಿಯ  ತೆರಳಿದ್ದನು. ಲಜಪತ್ ನಗರದ ಅಂಗಡಿಯೊಂದರ ಮುಂದೆ ಕುಳಿತಿದ್ದ ಕೆಲ ಯುವಕರು ನಿಡೋ ತಾನಿಯನ ಸ್ಪೈಕ್ ಹೇರ್ ಸ್ಟೈಲ್ ಅನ್ನು ಕಂಡು ಹಾಸ್ಯ ಮಾಡಿದ್ದಾರೆ. ಈ ವೇಳೆ ನಿಡೋ ತಾನಿಯ ಮತ್ತು ಆ ಯುವಕರ ಗುಂಪಿನ ನಡುವೆ ವಾಗ್ವಾದ ಉಂಟಾಗಿ ಇಬ್ಬರು ಪರಸ್ಪರ ಘರ್ಷಣೆಗೆ ಇಳಿದಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಎರಡೂ ಗುಂಪನ್ನು ಸಮಾಧಾನಗೊಳಿಸಿ ಮನೆಗೆ ಕಳುಹಿಸಿದ್ದಾರೆ.

ನಂತರ ಮನೆಗೆ ತೆರಳಿ ಮಲಗಿದ್ದ ನಿಡೋ ತಾನಿಯಾ ಜನವರಿ 30ರಂದು ಸಾವನ್ನಪ್ಪಿದ್ದಾನೆ. ಮೇಲ್ನೋಟಕ್ಕೆ ನಿಡೋ ತಾನಿಯ ಸಾವಿಗೆ ಆತನ ಮೈ ಮೇಲೆ ಬಿದ್ದಿರುವ ಮೂಗೇಟುಗಳೇ ಕಾರಣ ಎನ್ನಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರು ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement