ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಖಾಪ್ ಪಂಚಾಯತ್ ನಮ್ಮ ಸಂಸ್ಕೃತಿಯ ಭಾಗವಾಗಲ್ಲ: ಚಿದಂಬರಂ

ಖಾಪ್ ಪಂಚಾಯತ್‌ನ್ನು ಸಮರ್ಥಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ತಿರುಗೇಟು ನೀಡಿದ ...

Rashmi Kasaragodu
Updated On : 5 Feb 2014, 6:09 am

ನವದೆಹಲಿ: ಖಾಪ್ ಪಂಚಾಯತ್‌ನ್ನು ಸಮರ್ಥಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ತಿರುಗೇಟು ನೀಡಿದ ವಿತ್ತ ಸಚಿವ ಪಿ.ಚಿದಂಬರಂ ಖಾಪ್ ಪಂಚಾಯತ್ ವಿಮುಖವಾದ ಸಂಘಟನೆಯಾಗಿದ್ದು, ಇದು ಭಾರತೀಯ ಸಂಸ್ಕೃತಿಯ ಭಾಗವಲ್ಲ ಎಂದು ಹೇಳಿದ್ದಾರೆ.

ಖಾಪ್ ಪಂಚಾಯತ್ ಅಂದರೆ ಏನು? ಅದೊಂದು ವಿಮುಖವಾದ ಸಂಘಟನೆ. ಇದು ನಮ್ಮ ಸಂಸ್ಕೃತಿಯ ಭಾಗವಲ್ಲ. ಇದನ್ನು ನಮ್ಮ  ಸಂಸ್ಕೃತಿಯ ಭಾಗವೆಂದು ಹೇಳುವವರ ಬಗ್ಗೆ ನನಗೆ ಅಂಜಿಕೆಯಿದೆ. ಅದು ಹೇಗೆ ಭಾರತದ ಸಂಸ್ಕೃತಿಯ ಭಾಗವಾಗುತ್ತದೆ? ಎಂದು  ಶ್ರೀರಾಂ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ  ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಚಿದಂಬರಂ ಹೇಳಿದ್ದಾರೆ.

ಖಾಪ್ ಪಂಚಾಯತ್‌ಅಥವಾ ಚುನಾಯಿತವಲ್ಲದ ಗ್ರಾಮ ಪಂಚಾಯಿತಿ ವ್ಯವಸ್ಥೆಗಳನ್ನು ನಿಷೇಧಿಸುವ ಅಗತ್ಯವಿಲ್ಲ. ಅವೆಲ್ಲವೂ ನಮ್ಮ ಸಂಸ್ಕೃತಿಯ ಭಾಗಗಳಾಗಿವೆ ಎಂದು ಕೇಜ್ರಿವಾಲ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement