ಗೌರೀಶ್ ಅಕ್ಕಿಯವರ 'ಡಾರ್ಲಿಂಗ್'ಗಳು
ಪ್ರೇಮಿಗಳ ದಿನಾಚರಣೆಯ 'ಬಿಸಿ' ಗಾಂಧಿನಗರಕ್ಕೂ ತಟ್ಟಿದಂತೆ ಕಾಣುತ್ತಿದೆ.
ಪ್ರೇಮಿಗಳ ದಿನಾಚರಣೆಯ 'ಬಿಸಿ' ಗಾಂಧಿನಗರಕ್ಕೂ ತಟ್ಟಿದಂತೆ ಕಾಣುತ್ತಿದೆ. 'ಓ ಡಾರ್ಲಿಂಗ್ ಪ್ಲೀಸು ಕಮ್ಮು ಐ ಲವ್ ಯೂ ಮ್ಯಾಕ್ಸಿಮಮ್ಮು' ಎಂದು ಹಾಡುತ್ತಾ 'ಡಾರ್ಲಿಂಗ್' ಹೆಸರನ್ನು ಗಾಂಧಿನಗರದ ಮಂದಿ ತುಸು ಹೆಚ್ಚೇ ಎನಿಸುವಷ್ಟು ಆಪ್ಪಿಕೊಳ್ಳುತ್ತಿದ್ದಾರೆ. 'ಡಾರ್ಲಿಂಗ್' ಹೆಸರಿನ ಸಂತು ನಿರ್ದೇಶಿಸಿದ ಚಿತ್ರ ಸೂಪರ್ ತೋಪಾಗಿದೆ. ಎಷ್ಟರ ಮಟ್ಟಿಗೆ ಈ "ಡಾರ್ಲಿಂಗ್' ಪ್ರೇಕ್ಷಕರಿಲ್ಲದೇ ಸೊರಗುತ್ತಿದೆ ಅಂದರೆ ಚಿತ್ರಮಂದಿರದತ್ತ ಸುಳಿಯಲೂ ಜನ 'daring' ಆಗಿಲ್ಲವಂತೆ!