ತೆಲಂಗಾಣ ವಿವಾದ: ರಾಷ್ಟ್ರಪತಿ ಭೇಟಿ ಮಾಡಿದ ಆಂಧ್ರ ಸಿಎಂ
ತೆಲಂಗಾಣ ರಾಜ್ಯ ರಚನೆ ವಿವಾದದ ಬಗ್ಗೆ ವಿರೋಧ ವ್ಯಕ್ತ ಪಡಿಸಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ....
ನವದೆಹಲಿ: ತೆಲಂಗಾಣ ರಾಜ್ಯ ರಚನೆ ವಿವಾದದ ಬಗ್ಗೆ ವಿರೋಧ ವ್ಯಕ್ತ ಪಡಿಸಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಅದೇ ವೇಳೆ ರೆಡ್ಡಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಭೇಟಿ ಮಾಡಿ ಆಂಧ್ರದ ಸ್ಥಿತಿಗತಿಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
ಆಂಧ್ರದಲ್ಲಿ ಕಾಂಗ್ರೆಸ್ ಸರ್ಕಾರದ ಚುಕ್ಕಾಣಿ ಹಿಡಿದಿರುವ ರೆಡ್ಡಿ, ಬುಧವಾರ ಜಂತರ್ ಮಂತರ್ನಲ್ಲಿ 5 ಗಂಟೆಗಳ ಕಾಲ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.
ಇದು ಮಾತ್ರವಲ್ಲದೆ ಇವತ್ತು ತೆಲಂಗಾಣ ವಿವಾದವು ಸಂಸತ್ನಲ್ಲಿಯೂ ಚರ್ಚೆಗೆ ಗ್ರಾಸವಾಯಿತು.
ನಮ್ಮ ರಾಜ್ಯವನ್ನು ವಿಭಜಿಸುವುದು ಬೇಡ. ಇದಕ್ಕಾಗಿ ರಾಷ್ಟ್ರಪತಿಯವರು ತಮ್ಮ ಅಧಿಕಾರವನ್ನು ಬಳಸಬೇಕೆಂದು ನಾವು ಅವರಿಗೆ ವಿನಂತಿಸಿದ್ದೇವೆ ಎಂದು ರಾಷ್ಟ್ರಪತಿ ಭೇಟಿ ನಂತರ ಮಾತನಾಡಿದ ಕಿರಣ್ ಕುಮಾರ್ ರೆಡ್ಡಿ ಹೇಳಿದ್ದಾರೆ.