ನರೇಂದ್ರ ಮೋದಿ ಕಾಪ್ಟರ್ ಲ್ಯಾಂಡಿಂಗ್ ವಿವಾದ; ಇತ್ಯರ್ಥ
ನರೇಂದ್ರ ಮೋದಿ ಅವರ ಸಾರ್ವಜನಿಕ ರ್ಯಾಲಿ ನಡೆಯುವ ಮುನ್ನ ಇಲ್ಲಿನ ರೇಸ್ ಕೋರ್ಸ್ ಗ್ರೌಂಡ್ನಲ್ಲಿ ಮೋದಿಯವರ...
ಕೊಲ್ಕತ್ತಾ: ನರೇಂದ್ರ ಮೋದಿ ಅವರ ಸಾರ್ವಜನಿಕ ರ್ಯಾಲಿ ನಡೆಯುವ ಮುನ್ನ ಇಲ್ಲಿನ ರೇಸ್ ಕೋರ್ಸ್ ಗ್ರೌಂಡ್ನಲ್ಲಿ ಮೋದಿಯವರ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ನಿರಾಕರಿಸಿರುವುದು ವಿವಾದಕ್ಕೀಡಾಗಿದ್ದು, ಇದೀಗ ಇತ್ಯರ್ಥಗೊಂಡಿದೆ.
ಮೋದಿಯವರ ಹೆಲಿಕಾಪ್ಟರ್ನ್ನು ರೇಸ್ಕೋರ್ಸ್ ಗ್ರೌಂಡ್ನಲ್ಲಿ ಲ್ಯಾಂಡ್ ಮಾಡುವುದಕ್ಕೆ ಕೇಂದ್ರ ಸರ್ಕಾರ ವಿರೋಧ ಸೂಚಿಸಿತ್ತು. ಆಮೇಲೆ ರಕ್ಷಣಾ ಸಚಿವಾಲಯದ ಮೊರೆ ಹೋಗಿ, ಅಲ್ಲಿಂದ ಅನುಮತಿ ಪಡೆಯಬೇಕಾಗಿ ಬಂತು ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ರಾಹುಲ್ ಸಿನ್ಹಾ ಹೇಳಿದ್ದಾರೆ.
ಮೋದಿಯವರು ಇಂದು (ಬುಧವಾರ) ಕೊಲ್ಕತ್ತಾದ ಬ್ರಿಗೇಡ್ ಪರೇಡ್ ಗ್ರೌಂಡ್ನಲ್ಲಿ ರ್ಯಾಲಿ ನಡೆಸಲಿದ್ದಾರೆ.
ಪ್ರಸ್ತುತ ಗ್ರೌಂಡ್ನಲ್ಲಿ ರಾಷ್ಟ್ರಪತಿ ಅಥವಾ ಪ್ರಧಾನಿಯವರ ಹೆಲಿಕಾಪ್ಟರ್ ಲ್ಯಾಂಡ್ ಮಾಡಲು ಮಾತ್ರ ಅನುಮತಿ ಇರುವುದು. ಇನ್ಯಾವುದೇ ರಾಜಕಾರಣಿಗೆ ಅನುಮತಿ ನೀಡಲಾಗುವುದಿಲ್ಲ ಎಂದು ಹೇಳಿ ಸೇನಾಪಡೆ ಮೋದಿ ಕಾಪ್ಟರ್ ಲ್ಯಾಂಡಿಂಗ್ಗೆ ಅನುಮತಿ ನಿರಾಕರಿಸಿತ್ತು,
ಕೇಂದ್ರ ಸರ್ಕಾರ ಈ ಬಗ್ಗೆ ನಮಗೆ ಎರಡು ಮೂರು ದಿನ ಮೊದಲೇ ತಿಳಿಸಿದ್ದರೆ, ನಾವು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತಿದ್ದೆವು. ಕೇಂದ್ರ ಸರ್ಕಾರ ಇಂಥಾ ಎಡವಟ್ಟುಗಳನ್ನು ಸೃಷ್ಟಿಸುವ ಮೂಲಕ ಕೊಳಕು ರಾಜಕೀಯ ಮಾಡುತ್ತಿದೆ ಎಂದು ಸಿನ್ಹಾ ಹರಿಹಾಯ್ದಿದ್ದಾರೆ.