ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ವೋಟಿಗಾಗಿ ನೋಟು: ಅಮರ್ ಸಿಂಗ್ ಗೆ ಕ್ಲೀನ್‌ಚಿಟ್ ನೀಡಿದ್ದನ್ನು ಪ್ರಶ್ನಿಸಿದ ಆಪ್

ವೋಟಿಗಾಗಿ ನೋಟು ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಸೇರಿದಂತೆ 7 ಜನರನ್ನು ದೋಷಮುಕ್ತ...

Rashmi Kasaragodu
Updated On : 5 Feb 2014, 4:49 am

ನವದೆಹಲಿ: ವೋಟಿಗಾಗಿ  ನೋಟು ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಸೇರಿದಂತೆ 7 ಜನರನ್ನು ದೋಷಮುಕ್ತಗೊಳಿಸಿರುವುದನ್ನು ಪ್ರಶ್ನಿಸಿ ವಿಚಾರಣಾಧೀನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ದೆಹಲಿ ಸರ್ಕಾರ ಮುಂದಾಗಿದೆ.

ಅಮರ್ ಸಿಂಗ್ ಅವರೊಂದಿಗೆ  ಎಲ್.ಕೆ ಅಡ್ವಾಣಿ ಅವರ ಮಾಜಿ ಸಹಚರ ಸುಧೀಂದ್ರ ಕುಲಕರ್ಣಿ ಮತ್ತು ಇನ್ನಿತರ ಮೂವರು ಬಿಜೆಪಿ ನಾಯಕರಿಗೆ 2008ರ ವೋಟಿಗಾಗಿ ನೋಟು ಹಗರಣದಲ್ಲಿ ದೆಹಲಿ ಉಚ್ಚನ್ಯಾಯಾಲಯ ಕ್ಲೀನ್‌ಚಿಟ್ ನೀಡಿತ್ತು.

ನ್ಯಾಯಾಲಯದ ಈ ತೀರ್ಪು ಬಗ್ಗೆ ದೆಹಲಿ ಸರ್ಕಾರ ವಿವರವಾಗಿ ಅಧ್ಯಯನ ನಡೆಸಿದ್ದು, ದೆಹಲಿ ಹೈ ಕೋರ್ಟ್ ತೀರ್ಪನ್ನು  ಪ್ರಶ್ನಿಸಿ ಅರ್ಜಿ ಸಲ್ಲಿಸಲು ದೆಹಲಿ ಸರ್ಕಾರ ಮುಂದಾಗಿದೆ ಎಂದು ಹಿರಿಯ ಸಚಿವ ಮನೀಷ್ ಸಿಸೋಡಿಯಾ ಹೇಳಿದ್ದಾರೆ.

ಆ ಬಗ್ಗೆ ಅರ್ಜಿ ಸಲ್ಲಿಸುವಂತೆ ನಾವು ಲೆ. ಗವರ್ನರ್ ಅವರಿಗೆ ಶಿಫಾರಸು ಮಾಡಿದ್ದೇವೆ. ನಮ್ಮ ಕಾನೂನು ಅಧಿಕಾರಿಗಳು ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಈ ಬಗ್ಗೆ ಪ್ರಮುಖ ಸಾಕ್ಷ್ಯಗಳನ್ನು ಒದಗಿಸಲಿದ್ದಾರೆ ಎಂದು ಮಾಧ್ಯಮದವರಲ್ಲಿ ಮಾತನಾಡಿದ ಸಿಸೋಡಿಯಾ ಹೇಳಿದ್ದಾರೆ.

ಅದ್ಯಾಕೆ, ಈ ಪ್ರಕರಣದ ಬಗ್ಗೆ ಆಪ್ ಸರ್ಕಾರ ಈಗ ಪ್ರಶ್ನಿಸಲು ಮುಂದಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಸೋಡಿಯಾ, ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅದಕ್ಕಾಗಿ ಈ ಹೋರಾಟ ಎಂದು ಉತ್ತರಿಸಿದ್ದಾರೆ.

ವೋಟಿಗಾಗಿ  ನೋಟು ಪ್ರಕರಣದಲ್ಲಿ ವಿಚಾರಣಾಧೀನ ನ್ಯಾಯಾಲಯವು ಕಳೆದ ವರ್ಷ ಅಮರ್ ಸಿಂಗ್, ಕುಲಕರ್ಣಿ ಮತ್ತು ಬಿಜೆಪಿ ನಾಯಕರಾದ ಅಶೋಕ್ ಅರ್ಗಾಲ್, ಫಗ್ಗಾನ್ ಸಿಂಗ್ ಕುಲಾಸ್ತೆ, ಮಹಾಭೀರ್ ಸಿಂಗ್ ಭಗೋರ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತ ಸೊಹೈಲ್ ಹಿಂದುಸ್ತಾನಿ ಅವರಿಗೆ ಕ್ಲೀನ್‌ಚಿಟ್ ನೀಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement