ಇಶ್ರತ್ ಪ್ರಕರಣ: ಸಿಬಿಐಯಿಂದ ಎರಡನೇ ಆರೋಪಪಟ್ಟಿ ಸಲ್ಲಿಕೆ
ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ಎರಡನೇ ಜಾರ್ಜ್ ಶೀಟ್ ಸಲ್ಲಿಸಿದೆ...
ಅಹ್ಮದಾಬಾದ್: ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ ಎರಡನೇ ಜಾರ್ಜ್ ಶೀಟ್ ಸಲ್ಲಿಸಿದೆ.
ಆದಾಗ್ಯೂ, ಈ ಆರೋಪಪಟ್ಟಿಯಲ್ಲಿ ಸಿಬಿಐ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಆಪ್ತ ಸಹಚರ ಅಮಿತ್ ಷಾ ಅವರ ಹೆಸರನ್ನು ಕೈ ಬಿಟ್ಟಿದೆ.
ಷಾ ಬದಲಿಗೆ ಸ್ಪೆಷಲ್ ಡೈರೆಕ್ಟರ್ ರಾಜೇಂದ್ರ ಕುಮಾರ್ (ನಿವೃತ್ತ ) ಅವರನ್ನು ಪ್ರಧಾನ ಆರೋಪಿಯನ್ನಾಗಿ ಮಾಡಲಾಗಿದೆ. ರಾಜೇಂದ್ರ ಕುಮಾರ್ ಅವರ ಜತೆಗೆ ಪಿ. ಮಿತ್ತಲ್, ಎಂಕೆ ಸಿನ್ಹಾ ಮತ್ತು ರಾಜೀವ್ ವಾಂಕೆಡೆ ಹೆಸರು ಆರೋಪಪಟ್ಟಿಯಲ್ಲಿದೆ.
ಅಹ್ಮದಾಬಾದ್ ವಿಶೇಷ ನ್ಯಾಯಾಲಯದಲ್ಲಿ ಸಿಬಿಐ ಈ ಆರೋಪಪಟ್ಟಿ ಸಲ್ಲಿಸಿದೆ.