ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಕಲಾ ಕಂಠೀರವ' ಟಿ.ಎಸ್. ಕರಿಬಸಯ್ಯನವರ ಜನ್ಮಶತಮಾನೋತ್ಸವ

ಬೆಂಗಳೂರಿನ ಕಂಠೀರವ ಸ್ಟುಡಿಯೋಸ್ ನಿರ್ಮಾತೃ

'ಕಲಾ ಕಂಠೀರವ' ಟಿ.ಎಸ್. ಕರಿಬಸಯ್ಯನವರು ಹಾಗೂ ಕುಟುಂಬ ಸದಸ್ಯರು (07-02-1914 - 07-02-2014)
Lingaraj Badiger
Updated On : 6 Feb 2014, 12:37 pm

ಸಮಾಜಸೇವೆ ಮತ್ತು ಸಾಧನೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವುಗಳಲ್ಲಿ ಶಿಖರವೇರಿದವರು ಜಗದಲ್ಲಿ ಅಪಾರ ಕೀತರ್ಿಗೌರವ ಸಂಪಾದಿಸಿ ಶಾಶ್ವತವಾಗಿ ಉಳಿದುಬಿಡುತ್ತಾರೆ. ಇವು ಸುಲಭದ ಕೆಲಸಗಳಲ್ಲವೆಂದು ತಿಳಿದಿದ್ದರೂ ಕೆಲವು ವ್ಯಕ್ತಿಗಳು ದೃಡ ಸಂಕಲ್ಪದಿಂದ ಶಕ್ತಿವಂತರಾಗಿ ಈ ಹಾದಿಗಳಲ್ಲಿ ಸಾಗುವ ಸಾಹಸಕ್ಕೆ ಮುಂದಾಗುತ್ತಾರೆ. ಅಂತಹ ಮಹನೀಯರುಗಳಲ್ಲಿ ತಿಪಟೂರಿನ ಟಿ.ಎಸ್.ಕರಿಬಸಯ್ಯನವರು ಪ್ರಮುಖರು.

    ತಿಪಟೂರು ಕಲ್ಪತರು ನಾಡೆಂದೇ ಪ್ರಸಿದ್ಧಿಪಡೆದಿದೆ. ಸಾಹಿತ್ಯ, ಸಾಂಸ್ಕೃತಿಕ, ಧಾಮರ್ಿಕ, ಶೈಕ್ಷಣಿಕ ಹಾಗೂ ವ್ಯಾಪಾರಿಕ ಕ್ಷೇತ್ರಗಳಲ್ಲಿ ಅಗ್ರಸ್ಥಾನ ಪಡೆದಿದೆ. ಕಲಾಕ್ಷೇತ್ರ ಮತ್ತು ಸಮಾಜಸೇವೆಗಳಲ್ಲಿ ಅದರಲ್ಲೂ ಸಿನಿಮಾ ಕ್ಷೇತ್ರದಲ್ಲಿ ಹಾಸ್ಯಚಕ್ರವತರ್ಿ ದಿ.ನರಸಿಂಹರಾಜು, ಹೆಸರಾಂತ ಚಲನಚಿತ್ರನಟಿ ಉಮಾಶ್ರೀ ಅವರಂಥವರಿಗೆ ಜನ್ಮನೀಡಿ ನಾಡಿನೆಲ್ಲೆಡೆ ಕೀತರ್ಿ ತಂದುಕೊಟ್ಟಿರುವ ನಗರವಾಗಿದೆ. ಅಂತಹವರಿಗಿಂತಲೂ ಮಿಗಿಲಾದ ಸಾಧನೆ ಮಾಡಿ ಸಾರ್ಥಕ ಬದುಕನ್ನು ಸಾಗಿಸಿ ಕಲಾಕಂಠೀರವರೆಂದು ಬಿರುದು ಪಡೆದು ಅಮರರಾಗಿರುವರೇ ದಿವಂಗತ ಟಿ.ಎಸ್. ಕರಿಬಸಯ್ಯ.

    ಶ್ರೀಯುತರು ಮೂಲತಃ ತಿಪಟೂರಿನ ಸುಸಂಸ್ಕೃತ ಕುಟುಂಬದಲ್ಲಿ ಸಿದ್ದಲಿಂಗಪ್ಪ ಚಿಕ್ಕಬಸಮ್ಮ ದಂಪತಿಗಳಿಗೆ ಜನಿಸಿದವರು. ವೃತ್ತಿ ಕಬ್ಬಿಣದ ವ್ಯಾಪಾರವಾದರೂ ಮೃದುಮನದ ಸೌಜನ್ಯಮಯಿ, ಸಂಸ್ಕಾರವಂತರು. ತಂದೆ ತಾಯಿಗಳವರ ಪ್ರಭಾವ ಚಿಕ್ಕವಯಸ್ಸಿನ ಕರಿಬಸಯ್ಯನವರ ಮೇಲೆ ದಟ್ಟವಾಗಿ ಬೀರಿತು. ಅವರ ಸಚ್ಚಾರಿತ್ರ್ಯ, ಸನ್ನಡತೆ, ಆಚಾರ-ವಿಚಾರ. ದೇವರು ಭಕ್ತಿ, ಹಾಗೆಯೇ ಕಲಾಸಕ್ತಿಗಳು ಇವರನ್ನು ಆಕಷರ್ಿಸಿದವು. ಶಾಲೆಯಲ್ಲಿ ಅಭ್ಯಾಸ ಮಾಡುವ ಸಂದರ್ಭದಲ್ಲಿ ಪಠ್ಯದಲ್ಲಿನ ಹಲವು ಕಥೆಗಳು ಇವರ ಮನದಲ್ಲಿ ಸಂಚಲನವನ್ನುಂಟು ಮಾಡಿದವು. ಕಲೆ ಅವರನ್ನು ಕೈಬೀಸಿ ಕರೆದಂತೆ ಅನುಭವವಾಗಿ ರಂಗಭೂಮಿಯ ಕಡೆ ವಾಲಿದರು. ಆಸಂದರ್ಭದಲ್ಲಿ 'ವಿನೋದ ರತ್ನಾಕರ'ನೆಂದು ಕರೆಸಿಕೊಂಡಿದ್ದ ನಾಟಕರತ್ನ ಗುಬ್ಬಿ ವೀರಣ್ಣನವರು ತುಂಬಾ ಹೆಸರು ಮಾಡಿದ್ದರು. ಕಲಾ ಸೇವೆಯನ್ನು ಮಾಡಲೇಬೇಕೆಂಬ ಮಹದಾಸೆ ತುಂಬಿಕೊಂಡಿದ್ದ ಅವರ ಅಂತೂ ಗುಬ್ಬಿ ವೀರಣ್ಣನವರ ಸಖ್ಯ ಸಂಪಾದಿಸಿ, ರಂಗಭೂಮಿ ಪ್ರವೇಶಿಸಿ, ಗರಡಿಯಲ್ಲಿ ಪಳಗಿ ಅಫಾರ ಅನುಭವ ಪಡೆದುಕೊಂಡರು.
ಬಹು ಆಸಕ್ತಿ ಮತ್ತು ಚೈತನ್ಯದಿಂದ ಕೂಡಿದ್ದ ಕರಿಬಸಯ್ಯನವರು ಕಂಡ ವೀರಣ್ಣನವರು ಮೆಚ್ಚಿ ತನ್ನ ಶಿಷ್ಯನನ್ನಾಗಿ ಸ್ವೀಕರಿಸಿಕೊಂಡು ಅವರ ಅಗಾಧವಾದ ಕಲಾಪ್ರತಿಭೆಯನ್ನು ಪ್ರದಶರ್ಿಸುವ ಸಲುವಾಗಿ ರಂಗಕಲೆಯನ್ನು ಪ್ರತ್ಯಕ್ಷಮಾಡಿಸಿ ನಾಟಕಗಳ ನಿರ್ವಹಣೆಯ ಜವಾಬ್ದಾರಿಗಳನ್ನು ಅವರ ಹೆಗಲಿಗೆರಿಸಿದರು. ಇದರಿಂದ ಸ್ಫೂತರ್ಿಗೊಂಡ ಕರಿಬಸಯ್ಯನವರು ಶ್ರೇಷ್ಠ ನಾಟಕಗಳನ್ನು ನಾಡಿನಾದ್ಯಂತ ಪ್ರದಶರ್ಿಸಿ ವೀರಣ್ಣನವರ ಮನಗೆದ್ದರು. ಅಂದಿನಿಂದಲೇ ಅವರು ಕಲೆಯನ್ನು ನನ್ನ ಉಸಿರು, ಅದೇ ನನ್ನ ಸರ್ವಸ್ವ, ಅದು ನನ್ನ ಜೀವನದ ಸಾಧನೆಯಾಗಬೇಕು ಎಂಬ ಹಂಬಲದಿಂದ ಚಿತ್ರರಂಗದ ಕಡೆ ಮನಸ್ಸು ಹರಿಸಿದರು. ಚಿತ್ರ ನಿಮರ್ಾಣಕ್ಕೆಂದು ಮದರಾಸಿಗೆ ಹೋಗಬೇಕಾಗಿದ್ದ ಸಂದರ್ಭದ ಸಮಸ್ಯೆಗಳನ್ನು, ಚಿತ್ರರಂಗದವರು ಅನುಭವಿಸುತ್ತಿದ್ದ, ಕಷ್ಟಗಳನ್ನು ಅರ್ಥಮಾಡಿಕೊಂಡ ಕರಿಬಸಯ್ಯನವರು ನಮ್ಮ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಏನಾದರೂ ಮಾಡಿ ಒಂದು ಸುಸಜ್ಜಿತ ಸ್ಟುಡಿಯೋವನ್ನು ಸ್ಥಾಪಿಸಬೇಕೆಂಬ ಮಹದಾಸೆ ಹೊತ್ತು ಹೊರಟರು. ಅಹನರ್ಿಶಿ ಹೋರಾಟ ಮಾಡಿದರು. ಅದರ ಫಲವಾಗಿ ಬೆಂಗಳೂರಿನಲ್ಲಿ ಸ್ಥಾಪಿತವಾದದ್ದೇ 'ಕಂಠೀರವ ಸ್ಟುಡಿಯೋ' ಇದರ ನಿಮಾತರ್ೃಗಳೇ ತಿಪಟೂರಿನ ಟಿ.ಎಸ್.ಕರಿಬಸಯ್ಯನವರು.
    ಕಂಠೀರವ ಸ್ಟುಡಿಯೋಸ್ ಸ್ಥಾಪನೆಯ ಹಿಂದಿನ ಪರಿಶ್ರಮ ಅಪಾರ, ಕರಿಬಸಯ್ಯನವರು ಒಂದೆಡೆ ಷೇರು ಸಂಗ್ರಹಿಸಲು ಊರು-ಊರು ಸುತ್ತಿದರೆ, ಇನ್ನೊಂದೆಡೆ ಸ್ಟುಡಿಯೋ ನಿಮರ್ಿಸಲು ಸೂಕ್ತವಾದ ಭೂಮಿಗಾಗಿ ಅಥವಾ ಜಾಗಕ್ಕಾಗಿ ಹುಡುಕಾಡಿದರು. ಅಂತೂ ಕೊನೆಗೆ 115 ಮಂದಿ ರೈತರ ಮನವೊಲಿಸಿ ಅವರ ಒಡೆತನದಲ್ಲಿದ್ದ 17.5 ಎಕರೆ ಭೂಮಿಯನ್ನು ತುಮಕೂರು-ಬೆಂಗಳೂರು ಹೆದ್ದಾರಿಯ ಒಳಭಾಗದಲ್ಲಿ ಭೂಮಿಯನ್ನು ಪಡೆಯುವಲ್ಲಿ ಯಶಸ್ವಿಯಾದರು. ಅವರ ನಿರಂತರ ಹೋರಾಟಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟವರೇ ವೀರಣ್ಣನವರು. ಕರಿಬಸಯ್ಯನವರು ಸ್ಟುಡಿಯೊ ಆಸೆ ಬಗ್ಗೆ ವೀರಣ್ಣನವರಲ್ಲಿ ಮನವರಿಕೆ ಮಾಡಿಕೊಂಡಾಗ ತುಂಬು ಸಂತಸಪಟ್ಟು ನೀರುಗೊಬ್ಬರ ಹಾಕಿ ಬೆಳೆಸಲನುವಾದರು.
    ಇಂತಹ ಕೆಲಸಗಳಿಗೆ ಸಕರ್ಾರದ ಸಹಾಯ ಅತಿಮುಖ್ಯ, ಅದನ್ನು ಪಡೆಯಲು ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ನಿಜಲಿಂಗಪ್ಪನವರನ್ನು ಭೇಟಿಮಾಡಿ ಮನವಿಮಾಡಿಕೊಂಡಾಗ, ಅವರು ಸಮ್ಮತಿ ನೀಡಿ ಸ್ಟುಡಿಯೋದ ನಕ್ಷೆಯನ್ನು ತಯಾರಿಸಿಕೊಂಡು ಬನ್ನಿ ಎಂದು ಹೇಳಿಪ್ರೋತ್ಸಾಹಿಸುತ್ತಾರೆ. ಆಗ ಕರಿಬಸಯ್ಯನವರು ಪಾದರಸದಂತೆ ಓಡಾಡಿಕೊಂಡು ಚಿತ್ರೋಧ್ಯಮದವರೆಲ್ಲರ ಸಹಕಾರ ಪಡೆದು, ಜೊತೆಗೆ ಅಂದಿನ ಸಹಕಾರಿ ಧುರೀಣರಾಗಿದ್ದ ಸಚಿವ ಕೆ.ವಿ.ಶಂಕರೇಗೌಡರ ನಾಯಕತ್ವದಲ್ಲಿ ದಿನಾಂಕ :18-03-1966 ರಂದು ಕರಿಬಸಯ್ಯನವರು 'ಕಂಠೀರವ ಸ್ಟುಡಿಯೋಸ್'ನ್ನು ಸ್ಥಾಪಿಸಿದರು. ಇದಕ್ಕಿಂತ ಮೊದಲೇ ಕರಿಬಸಯ್ಯನವರು ಡಾ.ರಾಜ್ಕುಮಾರ್ ಮತ್ತು ಬಿ.ಸರೋಜಾದೇವಿ ಅಭಿನಯದ 'ಅಣ್ಣ-ತಂಗಿ' (1958) ಡಾ.ರಾಜ್ ಮತ್ತು ಲೀಲಾವತಿ ಅಭಿನಯದ 'ರಾಣಿ ಹೊನ್ನಮ್ಮ' (1960) ಎಂಬ 2 ಯಶಸ್ವೀ ಚಲನಚಿತ್ರಗಳನ್ನು ನಿಮರ್ಾಣಮಾಡಿ ಶ್ರೇಷ್ಠನಿಮರ್ಾಪಕರು ಎನಿಸಿಕೊಂಡರು. ಈ ಚಿತ್ರದ ಹಾರೂತ ದೂರಾ ದೂರಾ ಮೇಲೇರುವ ಬಾರಾ ಬಾರಾ ಕೈಗೂಡಲಿ ಸ್ವೈರ ವಿಹಾರ : ಎಂಬ ಹಾಡು ಇಂದಿಗೂ ಜನಪ್ರಿಯವಾಗಿದೆ.
    ಇದಾದ ಮೇಲೆ ಅವರು ಸಕರ್ಾರದ ಜೊತೆ ನಿರಂತರ ಹೋರಾಡಿ, ಹಣಬಿಡುಗಡೆಗಾಗಿ ಅಲೆದಾಡಿ ಹಣ ಸಂಗ್ರಹಿಸಿ ಸ್ಟುಡಿಯೋಕ್ಕೆ ಬೇಕಾದ ಚಿತ್ರನಿಮರ್ಾಣದ ಯಂತ್ರೋಪಕರಣಗಳನ್ನುಕೊಂಡು ಚಿತ್ರ ನಿಮರ್ಾಣ ಕಾರ್ಯವನ್ನು 1970ರಲ್ಲಿ ಕಾಯರ್ಾರಂಭಮಾಡಿಯೇ ಬಿಟ್ಟರು. ಈ ಸಂದರ್ಭದಲ್ಲಿ 'ಠಕ್ಕಬಿಟ್ರೆ ಸಿಕ್ಕ' ಎಂಬ ಕನ್ನಡ ಚಲನಚಿತ್ರ ಈ ಸ್ಟುಡಿಯೋದಲ್ಲಿ ನಿಮರ್ಾಣಗೊಂಡ ಪ್ರಪ್ರಥಮ ಕನ್ನಡ ಚಲನಚಿತ್ರವಾಗಿದೆ. ಅಂತೂ ಅವರ ಬಹುದಿನಗಳ ಕನಸು ನನಸಾದ ಸಂಭ್ರಮದಲ್ಲಿ ನಲಿದಾಡಿದರು. 1972 ರಲ್ಲಿ ಅದೇ ಸ್ಟುಡಿಯೋದಲ್ಲಿ ಕಾವೇರಿ ಮತ್ತು ಕಲ್ಯಾಣಿ ಎಂಬ 2 ಪ್ಲೋರ್ಗಳನ್ನು ಅಂದಿನ ಕಂದಾಯ ಸಚಿವರಾಗಿದ್ದ ಹುಚ್ಚುಮಾಸ್ತಿಗೌಡರು, ಕೈಗಾರಿಕಾ ಸಚಿವರಾಗಿದ್ದ ಎಸ್.ಎಂ.ಕೃಷ್ಣರವರಿಂದ ಉದ್ಘಾಟಿಸಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು.
    ಕಂಠೀರವ ಸ್ಟುಡಿಯೋದ ಅಭಿವೃದ್ಧಿಗಾಗಿ ಕರಿಬಸಯ್ಯನವರು ಅನಂತರ ಮುಖ್ಯಂಮತ್ರಿಗಳಾಗಿದ್ದ ವೀರೇಂದ್ರ ಪಾಟಿಲರನ್ನು ಭೇಟಿಮಾಡಿ ಚಚರ್ಿಸಿ ಸಮಾಲೋಚಿಸಿದರು. ಅವರ ಸಹಕಾರ, ಸಹಾಯ, ನೆರವಿನಿಂದ ಸ್ಟುಡಿಯೋದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದರು ತಾವೊಬ್ಬರೇ ಸವರ್ಾಧಿಕಾರಿಯಂತೆ ವತರ್ಿಸಿದೆ ಚಿತ್ರಂಗದ ಗಣ್ಯ ಮಹನೀಯರುಗಳೆಲ್ಲರನ್ನು ಒಗ್ಗೂಡಿಸಿ, ಸಾಮರಸ್ಯದ ಭಾವನೆ ಮೂಡಿಸಿ ಚಿತ್ರನಿಮರ್ಾಣಕ್ಕೆ ಅನುಕೂಲ ಮಾಡಿಕೊಟ್ಟರು. ಇಲ್ಲಿಂದ ಅವರ ಹೆಸರು ನಾಡಿನಾದ್ಯಂತ ಪ್ರಖ್ಯಾತಿ ಪಡೆಯಿತು.

    ಕರಿಬಸಯ್ಯನವರ ಕಂಠೀರವ ಸ್ಟುಡಿಯೋಸ್ ಪ್ರೈ.ಲಿ., ಸಮಿತಿಯಲ್ಲಿ ಹಲವು ಪ್ರಮುಖ ವ್ಯಕ್ತಿಗಳಿದ್ದು, ಅವರಲ್ಲಿ ಆತ್ಮ ಬಲ ತುಂಬಿ ಪ್ರೋತ್ಸಾಹಿಸಿದವರಲ್ಲಿ ಪತ್ನಿ ಶವರ್ಾಣಮ್ಮ ಮತ್ತು ಮಕ್ಕಳು, ಮಂಡ್ಯದ ಶ್ರೀ ಕೆ.ವಿ.ಶಂಕರೇಗೌಡರು, ಧರ್ಮಸ್ಥಳದ ರತ್ನವರ್ಮ ಹೆಗಡೆ ಮತ್ತು ಅವರ ಸುಪುತ್ರರಾದ ಡಾ. ವೀರೇಂದ್ರಹೆಗ್ಗಡೆ, ಸಾಹಿತಿ ಪಾಟೀಲ ಪುಟ್ಟಪ್ಪ, ಪುಟ್ಟಣ್ಣ ಕಣಗಾಲ್ ತಿಪಟೂರಿನ ಜಿ.ಕೆ.ಮಲ್ಲಪ್ಪ, ಡಿ.ಎಂ. ಚಂದ್ರಶೇಖರ್, ಹೆಚ್.ಎಂ.ಶಾಂತಣ್ಣ, ಪಲ್ಲಾಗಟ್ಟಿ ಅಡವಪ್ಪ, ಬಿ.ನಂಜಪ್ಪ ಮೊದಲಾದ ಪ್ರಮುಖರು. ಮೈಸೂರಿನ ಪ್ರಸಿದ್ಧ ಸಾಹಿತಿ ಡಾ. ದೇ. ಜವರೇಗೌಡರು ಕರಿಬಸಯ್ಯನವರ ಜೀವನದ ಸಾಧನೆಗಳನ್ನು ಕುರಿತು ಕಲಾ ಕಂಠೀರವ ಕರಿಬಸಯ್ಯ ಎಂಬ ಒಂದು ಪುಸ್ತಕವನ್ನು ರಚಿಸಿದ್ದಾರೆ ಹಾಗೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯು ಚಿತ್ರರಂಗದ ಅಮೃತಮಹೋತ್ಸವದ ಸಮಾರಂಭದಲ್ಲಿ ಕರಿಬಸಯ್ಯನವರ ಸಾಧನೆ ಕುರಿತ ಮತ್ತೊಂದು ಪುಸ್ತಕವನ್ನು ಹೊರತಂದಿದೆ.
    ಕರಿಬಸಯ್ಯನವರು ಕೇವಲ ಕಂಠೀರವ ಸ್ಟುಡಿಯೋಸ್ ಸ್ಥಾಪಕರಷ್ಟೇ ಅಲ್ಲ, ಅಶಕ್ತ ಕಲಾವಿದರ ಆಶ್ರಯದಾತರೂ ಹೌದು. ಕಲಾವಿದರಿಗೆ ತಾರತಮ್ಯವಿಲ್ಲದೆ ಸಹಾಯ ನೀಡುತ್ತಾ ಪ್ರೋತ್ಸಾಹಿಸುತ್ತಿದ್ದರು. ತಮ್ಮ ಹುಟ್ಟೂರಾದ ತಿಪಟೂರಿನಲ್ಲಿ ಚಿತ್ರ ಮಂದಿರವೊಂದು ಇಲ್ಲದಿದ್ದಾಗ ಗುರುಗಳಾದ 'ವಿನೋದರತ್ನಾಕರ' ವೀರಣ್ಣನವರ ನಾಮಧರಿಸಿ 'ವಿನೋದ ಚಿತ್ರಮಂದಿರ'ವನ್ನು ನಿಮರ್ಿಸಿ, ಗುಬ್ಬಿ ವೀರಣ್ಣನವರಿಂದಲೇ ಉದ್ಘಾಟಿಸಿರುವುದು ಕರಿಬಸಯ್ಯನವರ ಗುರುಭಕ್ತಿ ಮತ್ತು ಕಲೆಗೆ ಸಾಕ್ಷಿಯಾಗಿದೆ.
    ಕಲಾಕಂಠೀರವ ಬಿರುದು ಧರಿಸಿದ ಕರಿಬಸಯ್ಯನವರಿಗೆ ಅಪಾರ ಅಭಿಮಾನಿಬಳಗವಿತ್ತು. ಸ್ಟುಡಿಯೋಸ್ ಸ್ಥಾಪಿಸಿದ ಮೇಲಂತೂ ಎಲ್ಲರಿಂದಲೂ ಪ್ರಶಂಸೆಯ ಸುರಿಮಳೆಯೇ ಸುರಿಯಿತು. ಹೊಗಳಿಕೆಯ ಮಹಾಪೂರವೇ ಕೇಳಿ ಬಂದಿತು, ಹತ್ತು ಹಲವು ಪ್ರಶಸ್ತಿ, ಪುರಸ್ಕಾರಗಳು ಆರಿಸಿ ಬಂದವು. ಇಷ್ಟಾದರೂ ಅವರಿಗೆ ಅಹಂ ಆಗಲೀ, ಹಣ ಸಂಪಾದನೆಯ ಕಡೆ ಗಮನ ಹರಿಸುವುದಾಗಲಿ, ಮನಸ್ಸು ಮಾಡಲಿಲ್ಲ, ನಿಗವರ್ಿಗಳು, ನಿಸ್ವಾಥರ್ಿಗಳು, ಸಹೃದಯಿಗಳು, ಸಂಸ್ಕಾರವಂತರು, ಪ್ರಾಮಾಣಿಕರು, ಸಮಾಜಸೇವಕರು, ದಾನಶೂರರು ಎಲ್ಲದಕ್ಕಿಂತ ಹೆಚ್ಚಾಗಿ ಕಲಾಪೋಷಕರು. ರಂಗಭೂಮಿ ಮತ್ತು ಚಿತ್ರರಂಗದ ಎರಡೂ ಕ್ಷೇತ್ರಗಳಲ್ಲಿ ಸಾಧನೆ ಮಾಡುವಾಗ ಮನೆಮಠ ಹೆಂಡತಿ ಮಕ್ಕಳನ್ನು ಮರೆತವರು. ಎಲ್ಲಾ ಭಾಷೆಗಳ ದಿಗ್ಗಜರ, ಕಲಾವಿದರ, ರಾಜಕಾರಣಿಗಳನ್ನು ಸ್ಟುಡಿಯೋದ ಕಡೆ ಚಿತ್ತಹರಿಸುವಂತೆ ಮಾಡಿದರು. ದೇಶ ವಿದೇಶಗಳಿಂದ ಮಹಾನ್ ವ್ಯಕ್ತಿಗಳಿಂದ ಪ್ರಶಂಸೆಗೆ ಒಳಗಾದವರು. ಆದರೂ ಹೊಗಳಿಕೆಯಿಂದ ದೂರವೇ ಉಳಿದವರು.
ಸರಳ ಸಜ್ಜನಿಕೆಯ ಸಾಕಾರಮೂತರ್ಿಗಳಾದ ಕರಿಬಸಯ್ಯನವರು ಅಪ್ಪಟ ದೈವಭಕ್ತರು, ತುಂಬು ಕುಟುಂಬದವರು, ಸಾಧನೆಯ ಒಂದೊಂದೇ ಮೆಟ್ಟಿಲುಗಳನ್ನು ಏರಿ ಸಾಧಕರಾದರು. ಚಿತ್ರಂಗಕ್ಕೆ ಸ್ಟುಡಿಯೋ ಕೊಡುಗೆಯಾಗಿ ನೀಡಿದ ಪುಣ್ಯಾತ್ಮರಾದ ಕರಿಬಸಯ್ಯನವರು 'ವಿಶ್ವಮಾನವ ಬಸವಣ್ಣ ಭಕ್ತಿಪ್ರಧಾನ ಚಲನಚಿತ್ರದ ಚಿತ್ರೀಕರಣದ ಕೊನೆಯಹಂತದಲ್ಲಿ ದಿನಾಂಕ : 12-03-1992 ರಂದು ನಿಧನನಾದರು. ಅಂತಹ ಮಹಾನ್ ವ್ಯಕ್ತಿಗೆ ಈ ವರ್ಷ ಫೆಬ್ರವರಿ 07 ಕ್ಕೆ ಶತಮಾನ ತುಂಬುತ್ತದೆ. ಕಂಠೀರವ ಸ್ಟುಡಿಯೋ ನಿಮರ್ಾತೃವಾದ ಕರಿಬಸಯ್ಯನವರ ಜ್ಞಾಪಕಾರ್ಥ ಕಂಠೀರವ ಸ್ಟುಡಿಯೋದಲ್ಲಿ ಚಿಕ್ಕ ನಾಮಫಲಕವುಳ್ಳ ಶಿಲಾನ್ಯಾಸದ ಕಲ್ಲನ್ನು ಬಿಟ್ಟರೆ ಮತ್ತೇನೂ ಇಲ್ಲ.
    ತಿಪಟೂರಿನಲ್ಲಿ ಕರಿಬಸಯ್ಯನವರು ಪುರಸಭಾ ಸದಸ್ಯರಾಗಿದ್ದಾಗ ಬಡವರ ಮತ್ತು ಹಿಂದುಳಿದವರ್ಗದವರ ಶ್ರೇಯೋಭಿವೃದ್ಧಿಗಾಗಿ ತಮ್ಮ ಸ್ವಂತ 3 ಎಕರೆ ಭೂಮಿಯನ್ನು ನಿವೇಶನಕ್ಕಾಗಿ, ಉಚಿತವಾಗಿನೀಡಿ ಕೊಡುಗೈದಾನಿ ಎನಿಸಿದ್ದಾರೆ. ಇಂದು ಅದು ಕರಿಬಸಪ್ಪ ಕಾಲೋನಿಎಂದೇ ಹೆಸರಾಗಿದೆ.
ಇಂದು ರಂಗಭೂಮಿ ಮತ್ತು ಚಿತ್ರಂಗ ಬೃಹದಾಕಾರವಾಗಿ ಬೆಳೆದಿದೆ. ಸಾವಿರಾರು ಮಂದಿ ಇವುಗಳನ್ನೇ ನಂಬಿ ಬದುಕು ನಡೆಸುತ್ತಿದ್ದಾರೆ. ಕೀತರ್ಿಗಳಿಸಿದ್ದಾರೆ. ಆದುದರಿಂದ ಇಂತಹ ಮಹಾನ್ ಸಾಧಕ ಹಾಗೂ ಸಮಾಜ ಸೇವಕರಾದ ತಿಪಟೂರಿನ ದಿ. ಟಿ.ಎಸ್. ಕರಿಬಸಯ್ಯನವರ ಶತಮಾನೋತ್ಸವವನ್ನು ಸಕರ್ಾರ, ಸಂಸ್ಕೃತಿ ಇಲಾಖೆ, ವಾತರ್ಾ ಇಲಾಖೆ, ಚಲನಚಿತ್ರ ವಾಣಿಜ್ಯ ಮಂಡಳಿ, ಸಮಸ್ತ ಕನ್ನಡ ಚಿತ್ರೋದ್ಯಮದವರೆಲ್ಲರೂ ಒಟ್ಟಾಗಿ ಆಚರಿಸುವ ಮೂಲಕ ಇಂದಿನ ಪೀಳಿಗೆಗೆ ಪರಿಚಯಿಸುವ ನೆನಪಿನ ಶತಮಾನೋತ್ಸವ ಸಮಾರಂಭವನ್ನು ಮಾಡಿದರೆ ಮಾತ್ರ ಅವರ ಸಾಧನೆ ಸಾರ್ಥಕ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement