ಮಾರುತಿಯಿಂದ ಪುಟ್ಟ ಕಾರು ಸೆಲೆರಿಯೋ ಬಿಡುಗಡೆ
ದೇಶದ ಬಹುದೊಡ್ಡ ಕಾರು ನಿರ್ಮಾಣ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್ಐ) ಗುರುವಾರ ನೂತನ ಕಾರೊಂದನ್ನು ....
ನವದೆಹಲಿ: ದೇಶದ ಬಹುದೊಡ್ಡ ಕಾರು ನಿರ್ಮಾಣ ಕಂಪನಿ ಮಾರುತಿ ಸುಜುಕಿ ಇಂಡಿಯಾ (ಎಂಎಸ್ಐ) ಗುರುವಾರ ನೂತನ ಕಾರೊಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಗಾತ್ರದಲ್ಲಿ ಚಿಕ್ಕದಾಗಿರುವ ಈ ಕಾರಿನ ಹೆಸರು ಸೆಲೆರಿಯೋ. ಬೆಲೆ ರು.3.9 ಲಕ್ಷ ಮತ್ತು ರು.4.96 ಲಕ್ಷದ ವರೆಗೆ (ದೆಹಲಿಯ ಎಕ್ಸ್ ಶೋರೂಂ ಬೆಲೆ)
ಪ್ರಸ್ತುತ ಸೆಲೆರಿಯೋದಲ್ಲಿ ಮ್ಯಾನುವಲ್ ಟ್ರಾನ್ಮಿಷನ್ ಮಾಡೆಲ್ (4) ಕಾರಿನ ಬೆಲೆ ರು. 3.9 ಲಕ್ಷ ಮತ್ತು ರು. 4.96 ಲಕ್ಷ. ಅದೇ ವೇಳೆ ಆಟೋ ಗಿಯರ್ ಶಿಫ್ಟ್ ವೇರಿಯಂಟ್ (2) ಕಾರಿನ ಬೆಲೆ ರು. 4.29 ಮತ್ತು ರು. 4.49 ಲಕ್ಷ ರು.
ಇಂಧನ ಸಾಮರ್ಥ್ಯ: 23.1 / ಕಿ.ಮೀ ಇರುವ ಈ ಕಾರು 7 ಕಲರ್ಗಳಲ್ಲಿ ಲಭ್ಯವಾಗಲಿದೆ.