ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ವಿತರಣೆಗೆ 'ಹೈ' ತಡೆ

ಇದೇ ಫೆಬ್ರುವರಿ 9ಕ್ಕೆ ನಿಗದಿಯಾಗಿದ್ದ 2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ..

Lingaraj Badiger
Updated On : 7 Feb 2014, 4:44 am

ಬೆಂಗಳೂರು: ಇದೇ ಫೆಬ್ರುವರಿ 9ಕ್ಕೆ ನಿಗದಿಯಾಗಿದ್ದ 2010-11ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ತಡೆ ನೀಡಲು ಶುಕ್ರವಾರ ಹೈಕೋರ್ಟ್ ನಿರಾಕರಿಸಿದೆ. ಆದರೆ ಈ ಸಮಾರಂಭದಲ್ಲಿ 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪ್ರದಾನ ಮಾಡದಂತೆ ಕೋರ್ಟ್ ತಡೆ ನೀಡಿದೆ.

ಈ ಮುಂಚೆ ಭಾರತಿ ವಿಷ್ಣುವರ್ಧನ್ ನೇತೃತ್ವದ ಸಮಿತಿ 'ಶಬ್ದಮಣಿ' ಚಿತ್ರಕ್ಕೆ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಿತ್ತು. ಆದರೆ ಪ್ರಶಸ್ತಿ ಪಟ್ಟಿ ವಿವಾದಕ್ಕೀಡಾಗಿ ಹೈಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಸರ್ಕಾರ ನೇಮಕ ಮಾಡಿದ್ದ ಭಗುವಾನ್ ನೇತೃತ್ವದ ಮತ್ತೊಂದು ಸಮಿತಿ ಕೊಡ್ಲು ರಾಮಕೃಷ್ಣ ಅವರ 'ಮಾನಸ' ಚಿತ್ರಕ್ಕೆ 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ನೀಡಿತ್ತು.

'ಶಬ್ದಮಣಿ' ನಿರ್ಮಾಪಕ ರೇಣುಕುಮಾರ್ ಅವರು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಗೂ 'ಮಾನಸ' ಪ್ರಶಸ್ತಿಗೆ ತಡೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇಂದು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಸಮಾರಂಭಕ್ಕೆ ತಡೆ ನೀಡಲು ನಿರಾಕರಿಸಿದೆ.

ಇದೇ ಮೊದಲ ಬಾರಿಗೆ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಧಾರವಾಡದಲ್ಲಿ ನಡೆಯುತ್ತಿದ್ದು, 2010-11 ಹಾಗೂ 2011-12ನೇ ಸಾಲಿನ ಎರಡೂ ವರ್ಷಗಳ ಪ್ರಶಸ್ತಿಯನ್ನು ಫೆ.9ರ ಸಂಜೆ 6ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರದಾನ ಮಾಡಲಿದ್ದಾರೆ. ವಾರ್ತಾ ಇಲಾಖೆ ಸಚಿವ ರೋಷನ್ ಬೇಗ್, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement