ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅತ್ಯಾಚಾರಕ್ಕೊಳಗಾದ ಯುವತಿ ಗುಂಡೇಟಿಗೆ ಬಲಿ

ಅತ್ಯಾಚಾರಕ್ಕೊಳಗಾದ ಯುವತಿ ಮತ್ತು ಆಕೆಯ ತಾಯಿ ಮಥುರಾ ನ್ಯಾಯಾಲಯಕ್ಕೆ ಹೋಗುತ್ತಿದ್ದ ವೇಳೆ ಅನಾಮಿಕ ...

Rashmi Kasaragodu
Updated On : 7 Feb 2014, 3:42 am

ಮಥುರಾ, ಉತ್ತರ ಪ್ರದೇಶ: ಅತ್ಯಾಚಾರಕ್ಕೊಳಗಾದ ಯುವತಿ ಮತ್ತು ಆಕೆಯ ತಾಯಿ ಮಥುರಾ ನ್ಯಾಯಾಲಯಕ್ಕೆ ಹೋಗುತ್ತಿದ್ದ ವೇಳೆ ಅನಾಮಿಕ ಬಂಧೂಕುದಾರಿಯೊಬ್ಬರು ಯುವತಿಯನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಈ ದಾಳಿಯಲ್ಲಿ ಯುವತಿಯ ತಾಯಿಗೆ ಗಂಭೀರ ಗಾಯಗಳಾಗಿವೆ.

ಗುಂಡೇಟಿನಿಂದಾಗಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದು, ಆಕೆಯ ಅಮ್ಮನಿಗೆ ಗಂಭೀರ ಗಾಯಗಳಾವೆ ಎಂದು ಪೊಲೀಸರು ಹೇಳಿದ್ದಾರೆ.

ವೃಂದಾವನ್‌ನಲ್ಲಿರುವ ಆಶ್ರಮವೊಂದರ ಮಾಜಿ ಮುಖ್ಯಸ್ಥ ಮತ್ತು ಆತ ಶಿಷ್ಯರು ತನ್ನ ಮೇಲೆ ಅತ್ಯಾಚಾರಗೈದಿದ್ದರು ಎಂದು ಯುವತಿ ಕಳೆದ ವರ್ಷ ದೂರು ನೀಡಿದ್ದಳು.

ಈ ಬಗ್ಗೆ ಶುಕ್ರವಾರ ಸ್ಥಳೀಯ ನ್ಯಾಯಾಲಯಕ್ಕೆ ದೂರು ನೀಡಲು ಹೋಗುತ್ತಿದ್ದ ವೇಳೆ ಆಗಂತುಕನಿಂದ ಗುಂಡಿನ ದಾಳಿ ನಡೆದಿದೆ.

ಅತ್ಯಾಚಾರಕ್ಕೊಳಗಾದ ಯುವತಿಯ ಅಪ್ಪ ಆಶ್ರಮದ ಮಾಜಿ ಮುಖ್ಯಸ್ಥನ ಕಾರು ಚಾಲಕರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement