ಜೇವರ್ಗಿ ಬಳಿ ಭೀಕರ ರಸ್ತೆ ಅಪಘಾತ; 8 ಸಾವು
ಗುಲ್ಬರ್ಗಾ ಜಿಲ್ಲೆ ಅಫ್ಜಲ್ಪುರ ತಾಲೂಕಿನ ಜೇವರ್ಗಿ ಬಳಿ ಕೆಎಸ್ಸಾರ್ಟಿಸಿ ಬಸ್ ಮತ್ತು ಟಂಟಂ ಮುಖಾಮುಖಿಯಾಗಿ ಅಪಘಾತಕ್ಕೀಡಾಗಿದ್ದು...
ಗುಲ್ಬರ್ಗಾ: ಗುಲ್ಬರ್ಗಾ ಜಿಲ್ಲೆ ಅಫ್ಜಲ್ಪುರ ತಾಲೂಕಿನ ಜೇವರ್ಗಿ ಬಳಿ ಕೆಎಸ್ಸಾರ್ಟಿಸಿ ಬಸ್ ಮತ್ತು ಟಂಟಂ ಮುಖಾಮುಖಿಯಾಗಿ ಅಪಘಾತಕ್ಕೀಡಾಗಿದ್ದು, ಈ ಅಪಘಾತದಲ್ಲಿ 8 ಮಂದಿ ಸಾವಿಗೀಡಾಗಿದ್ದಾರೆ.
ಕೆಎ 33, 9138 ಸಂಖ್ಯೆಯ ಟಂಟಂನಲ್ಲಿ ಪ್ರಯಾಣಿಸುತ್ತಿದ್ದ 8 ಮಂದಿ ಪ್ರಯಾಣಿಕರೇ ಈ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.
ಇಲ್ಲಿನ ಭಾಗ್ಯವಂತಿ ದೇವರ ದರ್ಶನ ಪಡೆಯಲು ಟಂಟಂ ನಲ್ಲಿ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಮಂದೇವಾಲ ಗ್ರಾಮದ ಬಳಿ ರಭಸದಲ್ಲಿ ಬರುತ್ತಿದ್ದ ಬಸ್ಗೆ ಟಂಟಂ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಟಂಟಂ ಬಸ್ ಕೆಳಗೆ ತೂರಿದೆ.
ಸಾವನ್ನಪ್ಪಿದವರಲ್ಲಿ ಇಬ್ಬರು ಮಕ್ಕಳು ಮತ್ತು ಮೂವರು ಮಹಿಳೆಯರು ಇದ್ದರೆನ್ನಲಾಗುತ್ತಿದೆ.