ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬ್ರಹ್ಮಾಂಡ ದರ್ಶನ

ತಾಜ್ ಮಹಲ್ ಚಂದ್ರು ಆಂದು ತುಂಬಾ ಗದ್ಗದಿತರಾಗಿದ್ದರು!

Lingaraj Badiger
Updated On : 7 Feb 2014, 11:39 am
ತಾಜ್ ಮಹಲ್ ಚಂದ್ರು ಆಂದು ತುಂಬಾ ಗದ್ಗದಿತರಾಗಿದ್ದರು! ಬೆಳಗ್ಗಿನಿಂದಲೂ ಓಡಾಡಿದ್ದರಿಂದಲೋ ಅಥವಾ ಬೇರಿನ್ಯಾವುದೋ ಕಾರಣದಿಂದಲೋ ಬೆವರಿಳಿಯುತ್ತಿತ್ತು ಮುಖದಿ, ಕೈಗಳು ನಡುಗುತ್ತಿದ್ದವು. ಕೊಂಚ ಎಮೋಷನಲ್ ಆಗಿಯೇ ಮಾತನಾಡಿದರು. ಬಿಡುಗಡೆಯಾಗುತ್ತಿರುವ ತಮ್ಮ ಬ್ರಹ್ಮ ಚಿತ್ರದ ಬಗ್ಗೆ ಮನ ಬಿಚ್ಚಿದರು. ರಾತ್ರಿ ಸುಮಾರು 9ರ ಆಸುಪಾಸು ನಮ್ಮ ಕಛೇರಿಗೆ ಬಂದಾಗ. ಆಗ ನಡೆದ ಮಾತುಕತೆಯಲ್ಲಿ ಚಂದ್ರು ತುಂಬಾನೆ ಡೌನ್ ಟು ಆರ್ತ್ ಆಗಿದ್ದರು, ಇಲ್ಲಿ ಅವರ ಅಸಮಾಧಾನವಿದೆ, ಒಂದಷ್ಟು ಗರ್ವವಿದೆ, ಕಷ್ಟವಿದೆ, ಸಿನೆಮಾ ಪ್ರೀತಿ ಇದೆ. ಅವರು ಮಾತನಾಡಿದ್ದರಲ್ಲಿ ಎಲ್ಲವೂ ಸತ್ಯ ಎನ್ನುವ ಹಾಗೂ ಇರಲಿಲ್ಲ.. ಅವರಿಗೂ ಒಂದು ಸಿನೆಮಾ ಹಿಟ್ ಆಗಲು ಗಿಮಿಕ್ಕುಗಳ ಅವಶ್ಯಕತೆ ಎಷ್ಟಿದೆ ಎಂಬುದರ ಬಗೆಗೆ ಅರಿವಿದೆ..

ಇವಿಷ್ಟನ್ನೂ ಯಾವುದೇ ಆಮಿಷವಿಲ್ಲದೆ, ಯಾರ ಹಂಗಿಗೂ ಒಳಗಾಗದೆ ನಿಮ್ಮ ಮುಂದೆ ಮುಕ್ತವಾಗಿ ಹಂಚಿಕೊಳ್ಳುತ್ತಿದ್ದೇವೆ. ಮುಕ್ತವಾಗಿ ನೇರ ದಿಟ್ಟ ನಿರಂತರ ಹಂಚಿಕೊಳ್ಳುವುದನ್ನು ಕೂಡ ತಪ್ಪು ಎನ್ನುವವರು ಇಲ್ಲಿಗೆ ತಮ್ಮ ಓದನ್ನು ನಿಲ್ಲಿಸಬಹುದು.
೫ ಹಿಟ್ಸ್ ಕೊಟ್ಟ ನಿಮ್ಮನ್ನು ಒಪ್ಪಿಕೊಂಡ ಬುದ್ಧಿವಂತ ಉಪೇಂದ್ರ ಅವರ ಚಿತ್ರಗಳಲ್ಲಿರುವಂತೆ ಅವರ ಮ್ಯಾನರಿಸಮ್ ಗೆ ಸೂಟ್ ಆಗುವಂತಹ ಪಂಚಿಂಗ್ ಡಯಲಾಗ್, ಅಭಿಮಾನಿಗಳಿಗೆ ಇಷ್ಟ ಆಗೋವಂತಹ ಗೆಟಪ್ಪು ಎಲ್ಲಾ ಇದೆಯಾ?
ಬ್ರಹ್ಮ ನೂರಕ್ಕೆ ನೂರು 'ಚಂದ್ರು ಚಿತ್ರ'. ಕತೆ ಹೇಳುವಾಗಲೆ ಉಪೇಂದ್ರರಿಗೆ ಅದನ್ನು ಮನದಟ್ಟು ಮಾಡಿದ್ದೆ. ಅವರೂ ಖುಷಿಯಿಂದಲೇ ಚಿತ್ರದುದ್ದಕ್ಕೂ ಸಹಕಾರ ನೀಡಿದರು.ಹೊಸ ಉಪೇಂದ್ರರನ್ನ ತೋರಿಸೋಕೆ ಪ್ರಯತ್ನಿಸಿದ್ದೇನೆ. ಚಿತ್ರದ ನಿಜವಾದ ನಾಯಕ ಕತೆ ಮತ್ತು ಚಿತ್ರಕತೆ. ರಿವರ್ಸ್ ಶೈಲಿಯಲ್ಲಿ ಚಿತ್ರವನ್ನ ನಿರೂಪಿಸಿರುವುದು ಚಿತ್ರದ ಹೈಲೈಟ್. ಚಿತ್ರ ಈಗಾಗಲೆ ಸೋಲ್ದ್ ಔಟ್ ಆಗಿದೆ.

Advertisement

Advertisement

ಬ್ರಹ್ಮನೂ ಉಪ್ಪಿಯ ಹಳೆ ಸ್ಟೈಲಲ್ಲೇ ಇದೆ ಅಂತಾರೆ ಕೆಲವರು, ಇತರರಂತೆ ಹುಳ ಯಾಕೆ ಬಿಡಬಾರದು?
ಹುಳ ಬಿಡೋ ಪ್ರಯೋಗಾತ್ಮಕ ಸಿನಿಮಾಗಳನ್ನ ಮಾಡೋದು ನನಗೆ ಬರೊಲ್ಲ. ನಾನೇನಿದ್ದರೂ ಕಮರ್ಷಿಯಲ್ ಸಿನಿಮಾ ಮಾಡೋನು. ಕಾಮನ್ ಜನಕ್ಕೆ ಚಿತ್ರದಲ್ಲಿ ಎನೇನ್ ಬೇಕೋ ಅದೆಲ್ಲಾ ಇದೆ ಬ್ರಹ್ಮದಲ್ಲಿ. ಹಾಡು, ಫೈಟು, ಅಕ್ದ್ಷನ್, ಪ್ರೀತಿ
ಚಿತ್ರದ ಹಾಡುಗಳು ಸೌಂಡ್ ಮಾಡುತ್ತಿಲ್ಲವಾದರೂ ಅದನ್ನು 'ಆರಿ'ಯದವರು ಮಾಡುತ್ತಿದೆಯೆನ್ನುತ್ತಿದ್ದಾರಲ್ಲ, ಏನಿದರ ಮರ್ಮ? ಅವರಿಗೇನಾದರೂ ಅಲ್ಟ್ರಾಸೋನಿಕ್ ಕಿವಿಯಿದೆಯೇ?
ನನ್ನ ಹಳೆಯ ಚಿತ್ರಗಳಲ್ಲಿ ಹಾಡುಗಳು ಪ್ರಧಾನವಾಗಿರುವುದನ್ನು ನೀವು ಗಮನಿಸಿರಬಹುದು. ಚಾರ್ ಮಿನಾರ್ ನ ಹಾಡುಗಳನ್ನಂತೂ ಜನ ತುಂಬಾನೆ ಎಂಜಾಯ್ ಮಾಡಿದ್ರು. ಈ ಚಿತ್ರಕ್ಕೂ ಚಾರ್ ಮಿನಾರ್ ಹಾಡುಗಳಿಗೆ ಸಂಗೀತ ನೀಡಿದ್ದ ಹರಿಯನ್ನು ಬಳಸಿಕೊಳ್ಳಬೇಕೆಂದಿದ್ದೆ ಆದರೆ ಆತ ತೆಲುಗು ನಿರ್ದೇಶಕ ರಾಜಮೌಳಿ ಚಿತ್ರವೊಂದರಲ್ಲಿ ಬ್ಯುಸಿ ಆಗಿದ್ದಾನೆ. ಹಾಗಾಗಿ ಗುರುಕಿರಣ್ ಬಂದರು. ಇಲ್ಲದಿದ್ದರೆ ಹರಿಯೇ ಈ ಚಿತ್ರಕ್ಕೂ ಸಂಗೀತ ಕೊಡಬೇಕಿತ್ತು. ಗುರು ಕೂಡ ಚೆನ್ನಾಗಿ ಕಂಪೋಸ್ ಮಾಡಿದ್ದಾರೆ. ಚಿತ್ರದ ಹಾಡುಗಳಲ್ಲಿ ಮೆಲೋಡಿಗೆ ಪ್ರಾಧಾನ್ಯತೆ ಇಲ್ಲದಿದ್ದರೂ, ಟಿಂಗ್ ಟಿಂಗ್ ಅಂತ ಒಂದು ಫಾಸ್ಟ್ ಬೀಟ್ ಸಾಂಗ್ ಕೊಟ್ಟಿದ್ದಾರೆ ಗುರು. ಅದು ಯುವ ಜನರಿಗೆ ಇಷ್ಟವಾಗುತ್ತೆ. ಚಿತ್ರದ 75,000 ಸಿಡಿಗಳು ಆಗಲೇ ಖರ್ಚಾಗಿವೆ.

ಪ್ರಣೀತರವರು ನಟಿಸಿದ ಚಿತ್ರಗಳು ಓಡುವುದಿಲ್ಲ ಎನ್ನುತ್ತಾರಲ್ಲ, ನೀವೇನನ್ನುತ್ತೀರಿ?
ನಾನು ಮೂಢನಂಬಿಕೆಯನ್ನ ನಂಬಲ್ಲ. ಅವರು ನಟಿಸಿದ ಹೆಚ್ಚಿನ ಚಿತ್ರಗಳು ಓಡಿಲ್ಲವಾದರೂ, ನನಗೆ ಬ್ರಹ್ಮ ಚಿತ್ರದ ಕತೆಯಲ್ಲಿ ನಂಬಿಕೆಯಿದೆ. ಅದೂ ಅಲ್ಲದೆ ಆಕೆ ಇತ್ತೀಚೆಗೆ ನಾಯಕಿಯಾಗಿ ನಟಿಸಿದ ತೆಲುಗುನ 'ಅತ್ತಾರಿಂಟಿಕಿ ದಾರೇದಿ' ಸೂಪರ್ ಹಿಟ್ ಅಯಿತು. ದಕ್ಷಿಣ ಭಾರತದಲ್ಲಿ ಮೂರೂ ರಾಜ್ಯದ ಜನರಿಗೆ ಪರಿಚಯವಿರುವ ನಾಯಕಿಯೆಂದರೆ ಅವರೇ. ಮುಖ್ಯವಾಗಿ ತೆಲುಗು ಆಡಿಯನ್ಸ್ ನ ಮನದಲ್ಲಿಟ್ಟುಕೊಂಡು ಪ್ರಣೀತರನ್ನ ಆಯ್ಕೆ ಮಾದಿದ್ದು.

ನೀವು ಬ್ರಹ್ಮ ಒಟ್ಟು ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಅಂತ ಹೇಳಿದ್ದಿರಿ, ಇದು ಸುಳ್ಳಲ್ವಾ?


ನನಗೆ ಸುಳ್ಳ ಅನ್ನಿಸಿಕೊಳ್ಳೋದು ಇಷ್ಟವಿಲ್ಲ. ಮೂರೂ ಭಾಷೆಗಳ ಪ್ರಿಂಟ್ ತಯಾರಿದೆ, ನಿಜಕ್ಕೂ. ನನ್ನ ಪ್ಲಾನ್ ಇದ್ದಿದ್ದು ಸಾವಿರ ಚಿತ್ರಮಂದಿರಗಳಲ್ಲಿ ತೆರೆ ಕಾಣಿಸಬೇಕು ಅಂತಾನೆ ಆದರೆ ಕೊನೆಗೆ ಕೆಲವು ಕಾರಣಗಳಿಂದ ಚಿತ್ರಮಂದಿರಗಳ ಸಂಖ್ಯೆಯನ್ನು ತಗ್ಗಿಸಲಾಗಿದೆ. ಅವುಗಳಲ್ಲೊಂದು ಕಾರಣ ಪೈರಸಿ. ನಿಮಗೇ ಗೊತ್ತಿರುವ ಹಾಗೆ ಹೆಚ್ಚು ಚಿತ್ರಮಂದಿರಗಳಲ್ಲಿ ಅದರಲ್ಲೂ ಹೊರರಾಜ್ಯಗಳಲ್ಲಿ ತೆರೆ ಕಾಣಿಸುವುದು ರಿಸ್ಕಿ. ಪೈರಸಿ ತಡೆಗಟ್ಟಲು ಚಿತ್ರಮಂದಿರಗಳ ಸಂಖ್ಯೆ ಇಳಿಸಿದ್ದೇವೆ.

- ಹರ್ಷವರ್ಧನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement