ವಿದ್ಯುತ್ ಕಡಿತ ಬೇಡ: ಎನ್ಟಿಪಿಸಿಗೆ ಸುಪ್ರೀಂ ಆದೇಶ
ಮುಂದಿನ ವಿಚಾರಣೆವರೆಗೆ ವಿದ್ಯುತ್ ಕಡಿತ ಮಾಡದಂತೆ ಶುಕ್ರವಾರ ಸುಪ್ರೀಂ ಕೋರ್ಟ್ ಸರ್ಕಾರಿ ಸ್ವಾಮ್ಯದ ನ್ಯಾಷಿನಲ್..
ನವದೆಹಲಿ: ಮುಂದಿನ ವಿಚಾರಣೆವರೆಗೆ ವಿದ್ಯುತ್ ಕಡಿತ ಮಾಡದಂತೆ ಶುಕ್ರವಾರ ಸುಪ್ರೀಂ ಕೋರ್ಟ್ ಸರ್ಕಾರಿ ಸ್ವಾಮ್ಯದ ನ್ಯಾಷಿನಲ್ ಥರ್ಮಲ್ ಪವರ್ ಕಾರ್ಪೋರೇಷನ್(ಎನ್ಟಿಪಿಸಿ)ಗೆ ಆದೇಶಿಸಿದೆ.
ಕಳೆದ ವಾರವಷ್ಟೇ ಬಾಕಿ ಮೊತ್ತ ಪಾವತಿಸುವಂತೆ ಎನ್ಟಿಪಿಸಿ ರಿಲಾಯನ್ಸ್ ಸ್ವಾಮ್ಯದ ವಿದ್ಯುತ್ ವಿತರಣಾ ಕಂಪನಿಗಳಿಗೆ ನೋಟಿಸ್ ನೀಡಿತ್ತು. ಅಲ್ಲದೆ ಬಾಕಿ ಪಾವತಿಸದಿದ್ದರೆ ವಿದ್ಯುತ್ ಕಡಿತ ಮಾಡುವುದಾಗಿ ಎಚ್ಚರಿಸಿತ್ತು. ಆದರೆ ಈ ನೋಟಿಸ್ ವಿರುದ್ಧ ವಿತರಣಾ ಕಂಪನಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು.
ಇಂದು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ದೆಹಲಿಯಲ್ಲಿ ಮಾ.26ರವರೆಗೆ ವಿದ್ಯುತ್ ಕಡಿತ ಮಾಡದಂತೆ ಎನ್ಟಿಪಿಸಿಗೆ ಸೂಚಿಸಿದೆ. ಅಲ್ಲದೆ ಎರಡು ವಾರದಲ್ಲಿ ಬಾಕಿ ಮೊತ್ತ 50 ಕೋಟಿ ರುಪಾಯಿ ಎನ್ಟಿಪಿಸಿಗೆ ಸಂದಾಯ ಮಾಡುವಂತೆ ವಿದ್ಯುತ್ ವಿತರಣಾ ಕಂಪನಿಗಳಿಗೆ ಆದೇಶಿಸಿ, ವಿಚಾರಣೆಯನ್ನು ಮಾ.26ಕ್ಕೆ ಮುಂದೂಡಿದೆ.