ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಂದರ್ಶನದಲ್ಲಿ ಭಾಗ್ವತ್ ಹೆಸರು ಉಲ್ಲೇಖಿಸಿಲ್ಲ

ಹಿಂದೂ ಉಗ್ರ ದಾಳಿಯಲ್ಲಿ ಆರೆಸ್ಸೆಸ್ಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ಹೆಸರು ಕೇಳಿ ಬಂದು ವಿವಾದ ಸೃಷ್ಟಿಯಾಗಿರುವ ಬಗ್ಗೆ ...

Rashmi Kasaragodu
Updated On : 7 Feb 2014, 2:12 am

ನವದೆಹಲಿ: ಹಿಂದೂ ಉಗ್ರ ದಾಳಿಯಲ್ಲಿ ಆರೆಸ್ಸೆಸ್ಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ಹೆಸರು ಕೇಳಿ ಬಂದು ವಿವಾದ ಸೃಷ್ಟಿಯಾಗಿರುವ ಬಗ್ಗೆ ಅಸೀಮಾನಂದ ಅವರ ಸಂದರ್ಶನವನ್ನು ಪ್ರಕಟಿಸಿರುವ ಪತ್ರಿಕೆ ಇದೀಗ ಪ್ರತಿಕ್ರಿಯೆ ನೀಡಿದೆ.

ತಮ್ಮ ಪತ್ರಿಕೆಯಲ್ಲಿ ಅಸೀಮಾನಂದ ಅವರ ಸಂದರ್ಶನ ಪ್ರಕಟವಾಗಿದ್ದರೂ, ಆ ಸಂದರ್ಶನದಲ್ಲಿ ಎಲ್ಲಿಯೂ ಮೋಹನ್ ಭಾಗ್ವತ್ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಪತ್ರಿಕೆ ನ್ಯಾಯಾಲಯದಲ್ಲಿ ಹೇಳಿದೆ.

ಪತ್ರಿಕೆಯ ಪ್ರಕಾರ  2005, ಜುಲೈ ತಿಂಗಳಲ್ಲಿ ಗುಜರಾತ್‌ನ ದಂಗಾಸ್ ಜಿಲ್ಲೆಯಲ್ಲಿ ನಡೆದ ಸಭೆಯಲ್ಲಿ ಭಾಗ್ವತ್ ಅವರು ದಾಳಿ ಮಾಡುತ್ತಾ ಮುನ್ನುಗ್ಗಿ ಆದರೆ ಅಲ್ಲಿ ಆರೆಸ್ಸೆಸ್ಸ್ ಹೆಸರು ತಳುಕು ಹಾಕದಂತೆ ನೋಡಿಕೊಳ್ಳಿ ಎಂದು ಹೇಳಿದ್ದರು. ಈ ಆದೇಶವನ್ನು ಅವರು ಕೊಟ್ಟಿರುವುದು ಸುನಿಲ್ ಜೋಷಿ ಅವರಿಗೆ. ಹಿಂದೂ ಉಗ್ರವಾದಿಯಾಗಿರುವ ಸುನಿಲ್ ಜೋಷಿಗೆ ಸುಮಾರು 6 ಸ್ಫೋಟಗಳಲ್ಲಿ ಕೈವಾಡವಿದೆ ಎಂಬ ಆರೋಪವಿದೆ.

ಆದಾಗ್ಯೂ, ಅಸೀಮಾನಂದ ಅವರು ತಮ್ಮ ಸಂದರ್ಶನದಲ್ಲಿ ಈ ಸಭೆಯ ಬಗ್ಗೆಯೇ  ಮಾತನಾಡಿದ್ದರು. ಆದರೆ ಅವರೆಲ್ಲಿಯೂ ಭಾಗ್ವತ್ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಇದರ ಬದಲಾಗಿ ಅವರು ಭಾಗ್ವತ್ ಅವರ ಆರೆಸ್ಸೆಸ್ಸ್ ಸಹೋದ್ಯೋಗಿ ಇಂದ್ರೇಶ್ ಕುಮಾರ್ ಅವರ  ಹೆಸರನ್ನು ಹೇಳಿದ್ದರು ಎಂದು ಪತ್ರಿಕೆಯು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement