ಸವಾಲುಗಳನ್ನೆದುರಿಸಲು ದೇಶ ಸಿದ್ಧವಾಗಿರಬೇಕು: ಆಂಟನಿ
ಭಾರತದಲ್ಲಿರುವ ರಾಜಕೀಯ ವೈರುಧ್ಯಗಳ ವಾಸ್ತವಿಕತೆಯ ಸವಾಲುಗಳ ಬಗ್ಗೆ ಮಾತನಾಡಿದ ರಕ್ಷಣಾ ಸಚಿವ ಎ.ಕೆ ಆಂಟನಿ...
ನವದೆಹಲಿ: ಭಾರತದಲ್ಲಿರುವ ರಾಜಕೀಯ ವೈರುಧ್ಯಗಳ ವಾಸ್ತವಿಕತೆಯ ಸವಾಲುಗಳ ಬಗ್ಗೆ ಮಾತನಾಡಿದ ರಕ್ಷಣಾ ಸಚಿವ ಎ.ಕೆ ಆಂಟನಿ ಸಶಸ್ತ್ರ ಪಡೆಯನ್ನು ಆಧುನೀಕರಣಗೊಳಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.
ಅದೇ ವೇಳೆ ಭಾರತ ಯಾವತ್ತೂ ನೆರೆಯ ರಾಷ್ಟ್ರದೊಂದಿಗೆ ಶಾಂತಿ ಕಾಪಾಡಲು ಬಯಸುತ್ತದೆ. ಮಾತ್ರವಲ್ಲದೆ ರಕ್ಷಣಾ ವಿಧಾನಗಳನ್ನು ಇನ್ನಷ್ಟು ಸಬಲಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದಿದ್ದಾರೆ.
ಗಡಿಭಾಗದಲ್ಲಿ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಎಲ್ಲ್ಲ ರೀತಿಯ ಸವಾಲುಗಳನ್ನು ಎದುರಿಸಲು ಸಿದ್ಧರಾಗಬೇಕಾಗಿದೆ ಎಂದು DefExpo-2014 ಉದ್ಘಾಟನೆ ವೇಳೆ ಮಾತನಾಡಿದ ಸಚಿವರು ಹೇಳಿದ್ದಾರೆ.
ಭಾರತದ ವಿವಿಧ ಪ್ರದೇಶಗಳಲ್ಲಿ ವಿವಿಧ ರೀತಿಯ ರಕ್ಷಣಾ ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ. ಇವೆಲ್ಲವನ್ನೂ ಎದುರಿಸಲು ನಾವು ಸದಾ ಸಿದ್ಧರಾಗಿರಬೇಕು ಎಂದು ಆಂಟನಿ ಹೇಳಿದ್ದಾರೆ.