ಇಶ್ರತ್ ಪ್ರಕರಣ: ವಿವಾದಾತ್ಮಕ ಹೇಳಿಕೆ ನೀಡಿದ ರಂಜಿತ್ ಸಿನ್ಹಾ
ಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಅಮಿತ್ ಶಾ ಅವರ ಹೆಸರನ್ನು...
ನವದೆಹಲಿ: ಇಶ್ರತ್ ಜಹಾನ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಅಮಿತ್ ಶಾ ಅವರ ಹೆಸರನ್ನು ಸೇರಿಸಿದ್ದರೇ ಯುಪಿಎ ಸರ್ಕಾರಕ್ಕೆ ಖುಷಿಯಾಗುತ್ತಿತ್ತು ಎಂದು ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಹೇಳಿದ್ದಾರೆ.
ಆರೋಪ ಪಟ್ಟಿಯಲ್ಲಿ ಗುಜರಾತ್ ಸಿಎಂ ನರೇಂದ್ರ ಮೋದಿ ಆಪ್ತ ಅಮಿತ್ ಶಾ ಅವರ ಹೆಸರು ಆರೋಪ ಪಟ್ಟಿಯಲ್ಲಿ ಸೇರಿಸದಿರುವುದಕ್ಕೆ ಯುಪಿಎ ಸರ್ಕಾರಕ್ಕೆ ಬೇಸರವಾಗಿದೆ ಎಂದು ಹೇಳುವ ಮೂಲಕ ರಂಜಿತ್ ಸಿನ್ಹಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಶ್ರತ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಬದ್ಧವಾಗಿ ತನಿಖೆ ನಡೆಸುತ್ತಿದೆ. ಆದರೆ ಕೆಲವು ರಾಜಕೀಯ ಪಕ್ಷಗಳು ತಮ್ಮ ವಿರೋಧ ಪಕ್ಷದ ನಾಯಕರ ಹೆಸರನ್ನು ಆರೋಪ ಪಟ್ಟಿಯಲ್ಲಿ ಸೇರಿಸುತ್ತಾರೆಂದು ನಿರೀಕ್ಷೆಯಲ್ಲಿದ್ದರು ಎಂದು ಅವರು ತಿಳಿಸಿದ್ದಾರೆ.
ಅದರಲ್ಲೂ, ಅಮಿತ್ ಶಾ ಅವರ ಹೆಸರನ್ನು ಆರೋಪ ಪಟ್ಟಿಯಲ್ಲಿ ಸೇರಿಸಿದ್ದರೆ, ಯುಪಿಎ ಸರ್ಕಾರಕ್ಕೆ ಬಹಳ ಸಂತೋಷವಾಗುತ್ತಿತ್ತು. ಆದರೆ ಸಿಬಿಐ ಬಹಳ ಕಟ್ಟು ನಿಟ್ಟಿನಿಂದ ವಿಚಾರಣೆ ನಡೆಸಿ, ನ್ಯಾಯಾಬದ್ಧವಾಗಿ ತನಿಖೆ ನಡೆಸಿದೆ. ಅಮಿತ್ ಶಾ ಅವರ ವಿರುದ್ಧ ಯಾವುದೇ ದಾಖಲೇ ದೊರೆಯದ ಹಿನ್ನಲೆಯಲ್ಲಿ ಅವರ ಹೆಸರನ್ನು ಆರೋಪ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ರಂಜಿತ್ ಸಿನ್ಹಾ ಹೇಳಿದ್ದಾರೆ.
2004ರಲ್ಲಿ ಇಶ್ರತ್ ಜಹಾನ್ ಮತ್ತು ಸಹಚರರಾದ ಜಾವೇದ್ ಶೈಖ್, ಅಮಜಡಲ್ಲಿ ಅಕ್ಬರಲಿ ರಾನಾ ಮತ್ತು ಜೀಶ್ ಜೋಹರ್ ಅವರನ್ನು ನಕಲಿ ಎನ್ಕೌಂಟರ್ ಮಾಡಲಾಗಿತ್ತು.