ಮಣಿಪುರದ ಬಾಲಕಿ ಮೇಲೆ ಅತ್ಯಾಚಾರ, ವಿದ್ಯಾರ್ಥಿಗಳಿಂದ ಪ್ರತಿಭಟನೆ
ಮಣಿಪುರದ ಅಪ್ರಾಪ್ತ ಬಾಲಕಿಯ ಮೇಲೆ ದೆಹಲಿಯ ಭೂಮಾಲೀಕರೊಬ್ಬರ ಮಗ ಅತ್ಯಾಚಾರಗೈದ ಘಟನೆ ಶನಿವಾರ ವರದಿಯಾಗಿದೆ...
ನವದೆಹಲಿ: ಮಣಿಪುರದ ಅಪ್ರಾಪ್ತ ಬಾಲಕಿಯ ಮೇಲೆ ದೆಹಲಿಯ ಭೂಮಾಲೀಕರೊಬ್ಬರ ಮಗ ಅತ್ಯಾಚಾರಗೈದ ಘಟನೆ ಶನಿವಾರ ವರದಿಯಾಗಿದೆ.
ಇಂದು ಬೆಳಗ್ಗೆ ಬಾಲಕಿ ಒಬ್ಬಳೇ ಮನೆಯಲ್ಲಿರುವಾಗ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬಾಲಕಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಆದಾಗ್ಯೂ, ಈ ಘಟನೆಯ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯದ ವಿದ್ಯಾರ್ಥಿಗಳು ವಸಂತ ವಿಹಾರ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.
ಧನಿಕರೇ ವಾಸವಾಗಿರುವ ಪ್ರದೇಶವೊಂದರಲ್ಲಿ ಈ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಅತ್ಯಾಚಾರಕ್ಕೊಳಗಾದ ಬಾಲಕಿ ಹೇಳಿದ್ದಾಳೆ.