'ಶೂಮಾಕರ್ ಸಾವು' ಸುದ್ದಿ ಸ್ಫೋಟಕ್ಕೆ ಜನ ತತ್ತರ
ಕಳೆದ ಡಿಸೆಂಬರ್ನಲ್ಲಿ ಸ್ಕೀಯಿಂಗ್ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದ ಖ್ಯಾತ ಫಾರ್ಮುಲಾ ಒನ್ ಚಾಲಕ ..
ನವದೆಹಲಿ: ಕಳೆದ ಡಿಸೆಂಬರ್ನಲ್ಲಿ ಸ್ಕೀಯಿಂಗ್ ಅಪಘಾತದಿಂದ ತೀವ್ರವಾಗಿ ಗಾಯಗೊಂಡು ಕೋಮಾ ಸ್ಥಿತಿಗೆ ತಲುಪಿದ್ದ ಖ್ಯಾತ ಫಾರ್ಮುಲಾ ಒನ್ ಚಾಲಕ ಮೈಕಲ್ ಶೂಮಾಕರ್ ಸಾವಿಗೀಡಾಗಿದ್ದಾರೆ ಎಂಬ ಸುದ್ದಿಯನ್ನು ಗ್ರೆನೋಬ್ಲ್ ಯುನಿವರ್ಸಿಟಿ ಆಸ್ಪತ್ರೆ ತಳ್ಳಿ ಹಾಕಿದೆ.
ಶನಿವಾರ ಟ್ವಿಟರ್ನಂಥ ಮೈಕ್ರೋ ಬ್ಲಾಗಿಂಗ್ ಸೈಟು ಹಾಗು ಇನ್ನಿತರ ಸಾಮಾಜಿಕ ತಾಣಗಳಲ್ಲಿ ಶೂಮಾಕರ್ ಸಾವಿನ ಸುದ್ದಿ ಹರಿದಾಡಿತ್ತು.
ಶೂಮಾಕರ್ ಸಾವನ್ನಪ್ಪಿಲ್ಲ. ಅವರ ಸಾವಿನ ಸುದ್ದಿ ಸತ್ಯಕ್ಕೆ ದೂರವಾಗಿದೆ ಎಂಬ ಹೇಳಿಕೆಯನ್ನು ಆಸ್ಪತ್ರೆಯ ಮೂಲಗಳು ನೀಡಿರುವುದಾಗಿ ವಿದೇಶದ ಸುದ್ದಿಮೂಲವೊಂದು ವರದಿ ಮಾಡಿದೆ.
ಕಳೆದ ಡಿಸೆಂಬರ್ 29ರಂದು ಫ್ರಾನ್ಸ್ ನಲ್ಲಿ ಸ್ಕೀಯಿಂಗ್ ಮಾಡುತ್ತಿದ್ದ ಮೈಕೆಲ್ ಶೂಮಾಕರ್ ಅವರು ಆಯತಪ್ಪಿ ಕಲ್ಲು ಬಂಡೆಗೆ ಡಿಕ್ಕಿ ಹೊಡೆದಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಬಂಡೆಗೆ ಅವರ ತಲೆ ಬಡಿದ ಕಾರಣ ಅವರ ತಲೆಯಲ್ಲಿ ರಕ್ತ ಹೆಪ್ಪುಗಟ್ಟಿ ಅವರು ಕೋಮಾ ಸ್ಥಿತಿ ತಲುಪಿದ್ದರು. ಸತತ ಐದು ವಾರಗಳ ಚಿಕಿತ್ಸೆ ಪಡೆದಿದ್ದ ಶೂಮಾಕರ್ ಅವರಿಗೆ ಎರಡು ಪ್ರಮುಖ ಶಸ್ತ್ರ ಚಿಕಿತ್ಸೆ ನಡೆಸಿ ತಲೆಯಲ್ಲಿ ಹೆಪ್ಪುಗಟ್ಟಿದ್ದ ರಕ್ತವನ್ನು ಹೊರ ತಗೆಯಲಾಗಿತ್ತು.
41 ವರ್ಷದ ಶೂಮಾಕರ್ ಫಾರ್ಮುಲಾ 1 ರೇಸ್ನ ಚಾಲಕರಾಗಿದ್ದು, ಅತಿ ಹೆಚ್ಚು ರೇಸ್ಗಳನ್ನು ಗೆದ್ದ ದಾಖಲೆಯನ್ನು ಇವರು ಹೊಂದಿದ್ದಾರೆ. ಶೂಮಾಕರ್ ಅವರು ಗುಣಮುಖರಾಗಿ ಬರಲೆಂದು ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ.