ಸಂಭ್ರಮದಲ್ಲಿ ನಿರ್ದೇಶಕ ಆರ್.ಚಂದ್ರು
'ಬ್ರಹ್ಮ' ಚಿತ್ರದ ನಿರ್ದೇಶಕ ಆರ್ ಚಂದ್ರು ಚಿತ್ರದ ಬಿಡುಗಡೆಯ ದಿನವೇ (ಫೆಬ್ರವರಿ ೭) ತಮ್ಮ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದರು. ಈ ಸಂಧರ್ಭದಲ್ಲಿ ಚಿತ್ರದ ನಿರ್ಮಾಪಕ ಮಂಜುನಾಥ್ ಅವರು ಚಂದ್ರುವಿಗೆ ಇನ್ನೋವ ಕಾರ್ ಅನ್ನು ಕಾಣಿಕೆಯಾಗಿ ನೀಡಿದ್ದು ಹುಟ್ಟುಹಬ್ಬದ ಹುಡುಗನ ಸಂಭ್ರಮವನ್ನು ಇಮ್ಮಡಿಗೊಳಿಸಿತು.