ಸಂಸತ್ನಲ್ಲಿ ತೆಲಂಗಾಣ ವಿಧೇಯಕ ಅಂಗೀಕಾರಕ್ಕೆ ಬಿಜೆಪಿ ಬೆಂಬಲ ಕೇಳಿದ ಕಾಂಗ್ರೆಸ್
ಫೆ.12ಕ್ಕೆ ಸಂಸತ್ನಲ್ಲಿ ಮಂಡನೆಯಾಗಲಿರುವ ತೆಲಂಗಾಣ ರಚನೆ ಮಸೂದೆ ಅಂಗೀಕಾರಕ್ಕೆ ಬೆಂಬಲ ನೀಡಲು ಕಾಂಗ್ರೆಸ್ ಬಿಜೆಪಿ...
ನವದೆಹಲಿ: ಫೆ.12ಕ್ಕೆ ಸಂಸತ್ನಲ್ಲಿ ಮಂಡನೆಯಾಗಲಿರುವ ತೆಲಂಗಾಣ ರಚನೆ ಮಸೂದೆ ಅಂಗೀಕಾರಕ್ಕೆ ಬೆಂಬಲ ನೀಡಲು ಕಾಂಗ್ರೆಸ್ , ಬಿಜೆಪಿಯನ್ನು ಒಲಿಸುವ ಪ್ರಯತ್ನ ನಡೆಸುತ್ತಿದೆ.
ಶುಕ್ರವಾರ ನಡೆದ ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ತೆಲಂಗಾಣ ರಚನೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು.
ಕಾಂಗ್ರೆಸ್ನ ಹಿರಿಯ ನಾಯಕ ಅಹ್ಮದ್ ಪಟೇಲ್ ಮತ್ತು ದಿಗ್ವಿಜಯ್ ಸಿಂಗ್ ಬಿಜೆಪಿ ಮಾಜಿ ಮುಖ್ಯಸ್ಥ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಕೆಲವೊಂದು ಮೂಲಗಳು ವರದಿ ಮಾಡಿವೆ.
ಆದಾಗ್ಯೂ, ಹೈದ್ರಾಬಾದ್ನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂಬ ಕೇಂದ್ರ ಸಚಿವ ಪಲ್ಲಂ ರಾಜು ಅವರ ಒತ್ತಾಯಕ್ಕೆ ಕೇಂದ್ರ ಮಣಿದಿಲ್ಲ.
ಇದೀಗ ಪ್ರಸ್ತುತ ಅಧಿವೇಶನದಲ್ಲಿಯೇ ಈ ಮಸೂದೆಗೆ ಅಂಗೀಕಾರ ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.