ಒಡಿಶಾ ಸರ್ಕಾರದ ವಿರುದ್ಧ ರಾಹುಲ್ ಕಿಡಿ
ಕೇಂದ್ರ ನೀಡಲಾಗುತ್ತಿರುವ ಅನುದಾನವನ್ನು ಒಡಿಶಾ ಸರ್ಕಾರ ಕೊಳ್ಳೆ ಹೊಡೆಯುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ...
ಕಟಕ್: ಕೇಂದ್ರ ನೀಡಲಾಗುತ್ತಿರುವ ಅನುದಾನವನ್ನು ಒಡಿಶಾ ಸರ್ಕಾರ ಕೊಳ್ಳೆ ಹೊಡೆಯುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಆರೋಪಿಸಿದ್ದಾರೆ.
ಒಡಿಶಾದಲ್ಲಿ ಆಯೋಜಿಸಲಾಗಿರುವ ಕಾಂಗ್ರೆಸ್ ರ್ಯಾಲಿಯಲ್ಲಿ ಮಾತನಾಡಿದ ಅವರು, ಒಡಿಶಾ ಶ್ರೀಮಂತ ರಾಜ್ಯವಾಗಿದೆ. ಮ್ಯಾಂಗನೀಸ್, ಕಬ್ಬಿಣ, ಕಲ್ಲಿದ್ದಲು ಸೇರಿದಂತೆ ಮೂಸಭೂತ ಸಂಪನ್ನೂಲಗಳಿಂದ ಕೂಡಿದೆ. ಇಂತಹ ನಾಡಲ್ಲಿ ಬಡತನವೆಂದರೆ ವಿಷಾದ. ಬಡತನಕ್ಕೆ ಕಾರಣ ಒಡಿಶಾ ಸರ್ಕಾರ ಎಂದು ಆಪಾದಿಸಿದ್ದಾರೆ.
ರಾಜ್ಯದ ಅಭಿವೃದ್ಧಿಗಾಗಿ ಕೇಂದ್ರದಿಂದ ಸಾಕಷ್ಟು ಹಣ ಬಿಡುಗಡೆಯಾಗಿದೆ. ಆದರೆ ಒಡಿಶಾದ ರಾಜ್ಯದ ಜನತೆಗೆ ತಲುಪುತ್ತಿಲ್ಲ. ಕೇಂದ್ರದಿಂದ ಬಂದ ಹಣವನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ಸರ್ಕಾರ ಕೊಳ್ಳೆ ಹೊಡೆಯುತ್ತಿದೆ ಎಂದು ಅವರು ದೂರಿದ್ದಾರೆ.
ಬಿಜು ಜನತಾ ದಳ(ಬಿಜೆಡಿ) ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಬಿಸಿಯೂಟ ಯೋಜನೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಹಣವನ್ನು ಒಡಿಶಾ ಸರ್ಕಾರ ನುಂಗಿದೆ. ಇಂತಹ ಸರ್ಕಾರವನ್ನು ಕಿತ್ತೊಗೆದು, ಕಾಂಗ್ರೆಸ್‌ಗೆ ಮತ ನೀಡಿ. ಆಗ ಮಾತ್ರ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ರಾಹುಲ್ ಹೇಳಿದ್ದಾರೆ.