ಬ್ರಹ್ಮ ನಿರ್ಮಾಪಕ ದಿಲ್ಖುಷ್
ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ 'ಬ್ರಹ್ಮ' ಚಿತ್ರ ಮೊದಲ ದಿನವೇ...
ಬೆಂಗಳೂರು: ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ 'ಬ್ರಹ್ಮ' ಚಿತ್ರ ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ರು. 3 ಕೋಟಿ 65 ಲಕ್ಷ ಗಳಿಸಿದೆ.
ರಾಜ್ಯದ 250 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ 'ಬ್ರಹ್ಮ' ಚಿತ್ರಕ್ಕೆ ರು. 3 ಕೋಟಿ 65 ಲಕ್ಷ ಗಳಿಕೆ ಬಂದಿರುವುದು ಇಡೀ ಚಿತ್ರ ತಂಡಕ್ಕೆ ಸಂತಸವಾಗಿದೆ ಎಂದು ನಿರ್ದೇಶಕ ಆರ್. ಚಂದ್ರು ಹೇಳಿದ್ದಾರೆ.
ಬ್ರಹ್ಮ ಗಳಿಕೆ ಬಗ್ಗೆ ನಿರ್ಮಾಪಕ ಮಂಜುನಾಥ್ ಗೌಡ ಅವರು ಕೂಡ ಸಂತಸ ವ್ಯಕ್ತಪಡಿಸಿದ್ದು, ನಿರ್ದೇಶಕ ಆರ್.ಚಂದ್ರು ಅವರಿಗೆ ಉಡುಗೊರೆಯಾಗಿ ಇನೋವ ಕಾರು ನೀಡಿದ್ದಾರೆ.