ಭಾರತದಲ್ಲಿ ಮೈಕ್ರೋಸಾಫ್ಟ್ ಸೃಷ್ಟಿಸಿ: ನರೇಂದ್ರ ಮೋದಿ
ಕೇರಳದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸುವ ಮುನ್ನ ಚೆನ್ನೈಯಲ್ಲಿ ಕಾಲೇಜು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ...
ತಿರುವನಂತಪುರಂ: ಕೇರಳದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸುವ ಮುನ್ನ ಚೆನ್ನೈಯಲ್ಲಿ ಕಾಲೇಜು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಜಗತ್ತು ಬಾಗುತ್ತದೆ.. ಅದನ್ನು ಬಾಗಿಸುವವರು ಬೇಕಾಗಿದ್ದಾರೆ ಎಂದು ಹೇಳಿದ್ದಾರೆ.
65 ವರ್ಷಗಳಲ್ಲಿ ವಿದ್ಯಾಭ್ಯಾಸ ಕ್ಷೇತ್ರದತ್ತ ಯಾರೊಬ್ಬರೂ ಹೆಚ್ಚಿನ ಗಮನ ಹರಿಸದೇ ಇರುವುದು ದುರದೃಷ್ಟಕರ. ಅದೇ ವೇಳೆ ಜಾಗತಿಕ ಮಟ್ಟದ ರ್ಯಾಂಕಿಂಗ್‌ನಲ್ಲಿರುವ ಒಂದೇ ಒಂದು ವಿಶ್ವವಿದ್ಯಾನಿಲಯಗಳಿಲ್ಲ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ 35 ವರ್ಷಗಳಿಗಿಂತ ಕೆಳಗಿನ ಜನರ ಸಂಖ್ಯೆ ಶೇ. 65 ಇದೆ. ಭಾರತದಲ್ಲಿನ ಯುವಕರು ಇಲ್ಲಿ ಮೈಕ್ರೋಸಾಫ್ಟ್‌ನ್ನು ಸೃಷ್ಟಿಸಬೇಕಾಗಿದೆ ಎಂದು ಹೇಳಿದ್ದಾರೆ.
ಭಾನುವಾರ ಸಂಜೆ ಮೋದಿ ತಿರುವನಂತಪುರದ ಶಂಖಮುಖಂ ಕರಾವಳಿಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ.