ರಾಜಕೀಯಕ್ಕೆ ಪ್ರವೇಶಿಸುತ್ತೇನೆ ಎಂದು ಊಹಿಸಿರಲಿಲ್ಲ: ಕೇಜ್ರಿವಾಲ್
ರಾಜಕೀಯದ ಕ್ರಾಂತಿಕಾರ ಎಂದು ತನ್ನನ್ನು ತಾನೇ ಬಣ್ಣಿಸುವ ಅರವಿಂದ್ ಕೇಜ್ರಿವಾಲ್, ತಾನು ಯಾವತ್ತೂ ರಾಜಕೀಯಕ್ಕೆ ಪ್ರವೇಶಿಸುವೆ...
ನವದೆಹಲಿ: ರಾಜಕೀಯದ ಕ್ರಾಂತಿಕಾರ ಎಂದು ತನ್ನನ್ನು ತಾನೇ ಬಣ್ಣಿಸುವ ಅರವಿಂದ್ ಕೇಜ್ರಿವಾಲ್, ತಾನು ಯಾವತ್ತೂ ರಾಜಕೀಯಕ್ಕೆ ಪ್ರವೇಶಿಸುವೆ, ಪಕ್ಷವೊಂದನ್ನು ಕಟ್ಟಿ ಚುನಾವಣೆಯಲ್ಲಿ ಸ್ಪರ್ಧಿಸುವೆ ಎಂದು ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.
ನಾನು ಯಾವತ್ತೂ ರಾಜಕೀಯಕ್ಕೆ ಪ್ರವೇಶಿಸುತ್ತೇನೆ ಎಂದು ಊಹಿಸಿರಲಿಲ್ಲ ಎಂಬುದು ದೆಹಲಿ ಸಿಎಂ ಉವಾಚ.
ಕಳೆದ ತಿಂಗಳು ದೆಹಲಿಯಲ್ಲಿ ಪೊಲೀಸರ ವಿರುದ್ಧ ಧರಣಿ ಕುಳಿತುಕೊಂಡಾಗ ಕೇಜ್ರಿವಾಲ್ ತಮ್ಮನ್ನು ಅರಾಜಕತಾವಾದಿ ಎಂದು ಬಣ್ಣಿಸಿದ್ದರು.
ಭ್ರಷ್ಟ ರಾಜಕಾರಣ, ಕಾರ್ಪೊರೇಟ್ ನಾಯಕರು ಮತ್ತು ಕೆಲವು ಮಾಧ್ಯಮದವರು ಸಂತಸದಿಂದ ಜೀವನ ಸಾಗಿಸುತ್ತಿದ್ದರೆ ಇತ್ತ ಸಾಮಾನ್ಯ ಮನುಷ್ಯ ದುಃಖ ಪಡುತ್ತಿದ್ದಾರೆ.
ನಾವು ಈ ವ್ಯವಸ್ಥೆಯನ್ನು ಬದಲಾಯಿಸಬೇಕು ಅಂದಾಗ ನಾನು ಅರಾಜಕತಾವಾದಿ ಎಂದು ಹೇಳಿದ್ದೆ ಎಂದು ದೆಹಲಿಯಲ್ಲಿ ಪಿಟಿಐ ಸಂಪಾದಕರ ಜತೆ ನಡೆದ ಸಂವಾದದಲ್ಲಿ ಕೇಜ್ರಿವಾಲ್ ಹೇಳಿದ್ದಾರೆ.
ಆದಾಗ್ಯೂ, ನಿಮ್ಮನ್ನು ನೀವು ರಾಜಕಾರಣದ ಕ್ರಾಂತಿಕಾರಿ ಎಂದು ಕರೆಯಬಹುದೆ? ಎಂದು ಕೇಳಿದ್ದಕ್ಕೆ ಹೌದು ನಾನು ರಾಜಕಾರಣದ ಕ್ರಾಂತಿಕಾರಿ ಎಂದು ಕೇಜ್ರಿವಾಲ್ ಉತ್ತರಿಸಿದ್ದಾರೆ.