ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಡಬ್ಬಿಂಗ್‌ಗೆ ನನ್ನ ವಿರೋಧವಿದೆ: ಚಂದ್ರಶೇಖರ ಕಂಬಾರ

ಚಲನಚಿತ್ರ ಡಬ್ಬಿಂಗ್‌ಗೆ ನನ್ನ ವಿರೋಧವಿದೆ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಅವರು ಸೋಮವಾರ ಹೇಳಿದ್ದಾರೆ...

Mainashree
Updated On : 10 Feb 2014, 1:17 am

ಬೆಂಗಳೂರು: ಚಲನಚಿತ್ರ ಡಬ್ಬಿಂಗ್‌ಗೆ ನನ್ನ ವಿರೋಧವಿದೆ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಅವರು ಸೋಮವಾರ ಹೇಳಿದ್ದಾರೆ.

ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಡಬ್ಬಿಂಗ್ ವಿರೋಧಿಸಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಡಬ್ಬಿಂಗ್‌ಗೆ ನನ್ನ ಪೂರ್ಣ ವಿರೋಧವಿದೆ.

ಜ್ಞಾನ ಮೂಲದ ಚಾನಲ್‌ಗಳು ಕನ್ನಡಕ್ಕೆ ಬರಬೇಕು. ಆದರೆ ನನ್ನ ಹೇಳಿಕೆ ಚಲನಚಿತ್ರಗಳಿಗೆ ಅನ್ವಯಿಸುವುದಿಲ್ಲ. ಇದರಿಂದ ಹಳ್ಳಿ ಮಕ್ಕಳಿಗೆ ಉಪಯೋಗವಾಗುತ್ತದೆ. ಚಲನಚಿತ್ರ ಡಬ್ಬಿಂಗ್‌ಗೆ ನನ್ನ ವಿರೋಧವಿದೆ ಎಂದು ಅವರು ಹೇಳಿದ್ದಾರೆ.

ನಂತರ ಮಾತನಾಡಿದ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ಡಬ್ಬಿಂಗ್ ಬಗ್ಗೆ ಸರ್ಕಾರಕ್ಕೆ ಫೆ.15ರಂದು ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಕಾರ್ಯದರ್ಶಿ ಸ್ಥಾನಕ್ಕೆ ಸಾ.ರಾ ಗೋವಿಂದ್ ಅವರು ನೀಡಿರುವ ರಾಜಿನಾಮೆಯನ್ನು ಚಲನಚಿತ್ರ ವಾಣಿಜ್ಯ ಮಂಡಳಿ ಅಂಗೀಕರಿಸಬಾರದು ಎಂದು ವಾಟಾಳ್ ಒತ್ತಾಯಿಸಿದ್ದಾರೆ. ಒಂದು ವೇಳೆ ರಾಜಿನಾಮೆ ಅಂಗೀಕರಿಸಿದರೆ ವಾಣಿಜ್ಯ ಮಂಡಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement