ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ದೆಹಲಿ: ಬಹುಮತ ಕಳೆದುಕೊಂಡ ಆಪ್ ಸರ್ಕಾರ

ಪಕ್ಷೇತರ ಶಾಸಕ ರಾಂಬೀರ್ ಶೋಕೀನ್ ಅವರು ಆಮ್ ಆದ್ಮಿ ಪಕ್ಷ(ಎಎಪಿ)ದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ...

Vishwanath S
Updated On : 10 Feb 2014, 8:04 am

ನವದೆಹಲಿ: ಪಕ್ಷೇತರ ಶಾಸಕ ರಾಂಬೀರ್ ಶೋಕೀನ್ ಅವರು ಆಮ್ ಆದ್ಮಿ ಪಕ್ಷ(ಎಎಪಿ)ದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಸೋಮವಾರ ಬಹುಮತ ಕಳೆದುಕೊಂಡು ಅಲ್ಪಮತಕ್ಕೆ ಕುಸಿದಿದೆ.

ಇಂದು ಪಕ್ಷೇತರ ಶಾಸಕ ರಾಂಬೀರ್ ಬೆಂಬಲ ವಾಪಸ್ ಪಡೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಸಂಕಷ್ಟಕ್ಕೆ ಸಿಲುಕಿದೆ.

ಅರವಿಂದ್ ಕೇಜ್ರಿವಾಲ್ ಸರ್ಕಾರ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಪಕ್ಷೇತರ ಶಾಸಕ ರಾಂಬೀರ್ ಅವರು ಬೆಂಬಲ ವಾಪಸ್ ಪಡೆದಿದ್ದಾರೆ. ಹೀಗಾಗಿ ಆಪ್ ಬೆಂಬಲಿತ ಶಾಸಕರ ಸಂಖ್ಯೆ 35ಕ್ಕೆ ಕುಸಿದಿದ್ದು, ದೆಹಲಿಯಲ್ಲಿ ಸರ್ಕಾರ ಉಳಿವಿಗಾಗಿ ಕೇಜ್ರಿವಾಲ್ ಬಹುಮತ ಸಾಬೀತು ಪಡಿಸುವ ಅಗತ್ಯತೆ ಎದುರಾಗಲಿದೆ.

ಈ ಸಂಬಂಧ ಇಂದು ಸಂಜೆ ಉಪ ರಾಜ್ಯಪಾಲ ನಜೀಬ್ ಜಂಗ್ ಅವರನ್ನು ಭೇಟಿ ಮಾಡಿದ ರಾಂಬೀರ್ ಅವರು ಆಪ್ಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆಯುತ್ತಿರುವುದಾಗಿ ಪತ್ರ ನೀಡಿದ್ದಾರೆ.

ದೆಹಲಿಯಲ್ಲಿ 70 ಸ್ಥಾನಗಳ ಪೈಕಿ ಸರ್ಕಾರ ರಚನೆಗೆ 36 ಸ್ಥಾನಗಳ ಅವಶ್ಯಕತೆ ಇತ್ತು. ಪ್ರಸ್ತುತ ದೆಹಲಿಯ ವಿಧಾನಸಭೆಯಲ್ಲಿ 28 ಸ್ಥಾನ ಗಳಿಸಿದ್ದ ಆಪ್ಗೆ ಕಾಂಗ್ರೆಸ್ ಮತ್ತು ಇಬ್ಬರು ಪಕ್ಷೇತರ ಶಾಸಕರ ಬೆಂಬಲದಿಂದಾಗಿ ಸರ್ಕಾರ ರಚನೆ ಮಾಡಿತ್ತು. 28 ಸ್ಧಾನಗಳ ಪೈಕಿ ಆಪ್ ಶಾಸಕರೊಬ್ಬರು ಸ್ಪೀಕರ್ ಆಗಿದ್ದು, ವಿನೋದ್ ಕುಮಾರ್ ಬಿನ್ನಿ ಅವರನ್ನು ಪಕ್ಷದ್ರೋಹ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ದೆಹಲಿ ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ

ಆಮ್ ಆದ್ಮಿ ಪಕ್ಷ-26 (ಉಚ್ಚಾಟಿತ ವಿನೋದ್ ಕುಮಾರ್ ಬಿನ್ನಿ ಹೊರತುಪಡಿಸಿ)
ಕಾಂಗ್ರೆಸ್ - 8
ಜೆಡಿಯು - 1
ಪಕ್ಷೇತರ - 1
ಬಿಜೆಪಿ-31
ಸ್ಪೀಕರ್-1



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement