ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪಿಆರ್‌ಒ ಲಕ್ಷ್ಮಣ್ ಗೆ 'ಚಾಣಕ್ಯ' ಪ್ರಶಸ್ತಿ

ಮಾಧ್ಯಮ ಕ್ಷೇತ್ರದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ(ಪಿಆರ್‌ಒ)ಯಾಗಿ ಉತ್ತಮ...

Vishwanath S
Updated On : 11 Feb 2014, 3:37 am

ಮುಂಬೈ: ಮಾಧ್ಯಮ ಕ್ಷೇತ್ರದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ(ಪಿಆರ್‌ಒ)ಯಾಗಿ ಉತ್ತಮ ಸಾಧನೆ ಮಾಡುವ ಪಿಆರ್‌ಒಗಳಿಗೆ ಭಾರತೀಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಮಿತಿ(ಪಿಆರ್‌ಸಿಐ) ವತಿಯಿಂದ ನೀಡಲಾಗುವ ಅತ್ಯುನತ ಚಾಣಕ್ಯ ಪ್ರಶಸ್ತಿಗೆ ನ್ಯಾಕ್ ಸಂಸ್ಥೆಯ ವಿ. ಲಕ್ಷ್ಮಣ್ ಅವರು ಭಾಜನರಾಗಿದ್ದಾರೆ.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ನ್ಯಾಷನಲ್ ಅಸೆಸ್ಮೆಂಟ್ ಅಂಡ್ ಅಕ್ರಿಡಿಟೇಶನ್ ಕೌನ್ಸಿಲ್(ಎನ್‌ಎಎಸಿ)ನಲ್ಲಿ ಆಂತರಿಕ ಸಂವಹನಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷಣ್ ಅವರು ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಅಸಾಧಾರಣ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಚಾಣಕ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರತಿ ವರ್ಷ ಸಾರ್ವಜನಿಕ ಸಂಪರ್ಕಾಧಿಕಾರಿ ಕ್ಷೇತ್ರದಲ್ಲಿ ಉನ್ನತ ಕಾರ್ಯ ಸಾಧನೆ ಮಾಡಿದ ಪಿಆರ್‌ಒಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಮುಂಬೈನ ಪ್ರೆಸ್ ಕ್ಲಬ್‌ನಲ್ಲಿ ಫೆಬ್ರವರಿ 14 ಮತ್ತು 15 ರಂದು ಪಿಆರ್‌ಸಿಐ ಆಯೋಜಿಸಿರುವ ಜಾಗತಿಕ ಸಂವಹನ ಸಮಾರಂಭದಲ್ಲಿ ಲಕ್ಷ್ಮಣ್ ಅವರಿಗೆ ಚಾಣಕ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement