ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಹಮದಾಬಾದ್‌ನಲ್ಲಿ ಟೀ ಅಂಗಡಿ ಉದ್ಘಾಟಿಸಿದ ಮೋದಿ

ಗುಜರಾತ್ ಮುಖ್ಯಮಂತ್ರಿ...

Mainashree
Updated On : 12 Feb 2014, 6:52 am

ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು 'ಚಾಯ್ ಪೇ ಚರ್ಚಾ' ಎಂಬ ಶಿಬಿರಕ್ಕೆ ಚಾಲನೆ ನೀಡಿದ್ದು, ಟೀ ಅಂಗಡಿಯನ್ನು ಬುಧವಾರ ಉದ್ಘಾಟಿಸಿದ್ದಾರೆ.

ಉದ್ಘಾಟನೆ ನಂತರ ಮಾತನಾಡಿದ ಮೋದಿ ಉತ್ತಮ ರಾಷ್ಟ್ರ ನಿರ್ಮಾಣಕ್ಕೆ ಉತ್ತಮ ಆಡಳಿತ ಬೇಕು ಎಂದಿದ್ದಾರೆ.

ಬಿಜೆಪಿ 'ಚಾಯ್ ಪೇ ಚರ್ಚಾ' ಎಂಬ ಶಿಬಿರ ಪ್ರಾರಂಭಿಸಿದ್ದು, ಇಲ್ಲಿ ಜನರು ಟೀ ಕುಡಿಯುತ್ತಾ ಮೋದಿ ಅವರೊಂದಿಗೆ ನೇರವಾಗಿ ಚರ್ಚೆ ನಡೆಸಬಹುದಾಗಿದೆ.

ದೇಶದ 300 ನಗರದಲ್ಲಿ 1 ಸಾವಿರ ನಮೋ ಟೀ ಸ್ಟಾಲ್ ಸ್ಥಾಪನೆಗೆ ಚಾಲನೆ ನೀಡಿದ್ದು, ಚಾಯ್ ಪೇ ಚರ್ಚಾ ಎಂಬ ಹೆಸರಿನಿಂದ ಮೋದಿ ಟೀ ಸ್ಟಾಲ್‌ಗಳನ್ನು ಉದ್ಘಾಟಿಸಿದ್ದಾರೆ. ಜನತೆ ಅತಿ ಕಡಿಮೆ ಬೆಲೆ ನೀಡಿ, ಮೋದಿ ಅವರೊಂದಿಗೆ ಸಂವಾದ, ಪ್ರಶ್ನೆಗಳು, ಮತ್ತು ತಮ್ಮ ಅಭಿಪ್ರಾಯಗಳನ್ನು ನೇರವಾಗಿ ತಿಳಿಸಬಹುದಾಗಿದೆ. ಇದಕ್ಕೆ ವೀಡಿಯೋ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಬಿಜೆಪಿ ವಕ್ತಾರ ಹರ್ಷದ್ ಪಟೇಲ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement