ಕೇಂದ್ರ ಮಧ್ಯಂತರ ರೇಲ್ವೆ ಬಜೆಟ್ -2014 ಮಂಡನೆ
ಲೋಕಸಭೆಯಲ್ಲಿ ತೆಲಂಗಾಣ ಗದ್ದಲದ ನಡುವೆಯೇ ಯುಪಿಎ-2 ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಿದೆ
ನವದೆಹಲಿ: ಲೋಕಸಭೆಯಲ್ಲಿ ತೆಲಂಗಾಣ ಗದ್ದಲದ ನಡುವೆಯೇ ಯುಪಿಎ-2 ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಿದೆ. ಬುಧವಾರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು 4 ತಿಂಗಳುಗಳಿಗಾಗಿ ಇರುವ ಮಧ್ಯಂತರ ಬಜೆಟ್ನ್ನು ಲೋಕಸಭೆಯಲ್ಲಿ ಮಂಡಿಸಿದ್ದು
, ಖರ್ಗೆ ಅವರ ಪಾಲಿಗೆ ಇದು ಚೊಚ್ಚಲ ಬಜೆಟ್ ಮಂಡನೆಯಾಗಿದೆ.
ಬಜೆಟ್ ಮಂಡನೆಗೆ ಮುನ್ನ "ಕಳಬೇಡ ಕೊಲಬೇಡ'' ವಚನ ಪಠಿಸಿದ ಸಚಿವ ಖರ್ಗೆ , ದೇಶದ ಅಭಿವೃದ್ಧಿಗೆ ರೇಲ್ವೇ ವಿಕಾಸ ಅವಶ್ಯಕ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ರೇಲ್ವೆ ಬಜೆಟ್ ಮುಖ್ಯಾಂಶಗಳು
- ಜಮ್ಮು ಕಾಶ್ಮೀರದಲ್ಲಿ ಸಂಪರ್ಕ ಕಲ್ಪಿಸಲು ಸುರಂಗ ಮಾರ್ಗ
- 17 ಹೊಸ ಹವಾನಿಯಂತ್ರಣ ರೈಲು
- ಪ್ರಯಾಣದರಲ್ಲಿ ಯಾವುದೇ ಬದಲಾವಣೆ ಇಲ್ಲ
- ಜಮ್ಮುವಿನ ಕಾರ್ತಕ್ಕೆ ಸದ್ಯದಲ್ಲೇ ಪ್ರಯಾಣಿಕ ರೈಲು
- 68 ಹೊಸ ರೈಲುಗಳ ಘೋಷಣೆ
- ಹೊಸ ಮಾರ್ಗಗಳು ಹಾಗು ಹೆಚ್ಚೆಚ್ಚು ಸಂಕರ್ಪ ಕಲ್ಪಿಸಲು ಒತ್ತು
- 2,072 ಕಿ.ಮೀ ಹೊಸ ಮಾರ್ಗ ನಿರ್ಮಾಣಕ್ಕೆ ಸಿದ್ಧವಾಗಿದೆ. ಹೊಸ ಮಾರ್ಗಗಳ ಮೂಲಕ ಹೆಚ್ಚಿನ ಸಂಪರ್ಕ ವ್ಯವಸ್ಥೆ
- ಕಾಶ್ಮೀರದಿಂದ ಕನ್ಯಾಕುಮಾರಿಗೆ ಸಂಪರ್ಕ ಕಲ್ಪಿಸುವ ರೈಲು
- ರಾಷ್ಟ್ರೀಯ ಯೋಜನೆಗಳಿಗೆ ಅನುದಾನ
- ವೈಷ್ಣೋದೇವಿ -ಕಾರ್ತ ನಡುವೆ ಶೀಘ್ರದಲ್ಲಿ ಪ್ರಯಾಣಿಕ ರೈಲು
- ಜಮ್ಮು ಕಾಶ್ಮೀರದಲ್ಲಿ 11.2 ಕಿ.ಮೀ ಸುರಂಗ ಮಾರ್ಗ ವ್ಯವಸ್ಥೆ
- ಈಶಾನ್ಯ ರಾಜ್ಯಗಳಿಗೆ ರೇಲ್ವೆ ಸಂಪರ್ಕ ವಿಸ್ತರಣೆ
- 4,000 ಕಿ.ಮೀವರೆಗೆ ವಿದ್ಯುತ್ತೀಕರಣ ಯೋಜನೆ
- ಆರ್ಥಿಕವಾಗಿ ರೇಲ್ವೆ ಇಲಾಖೆ ಬಲಿಷ್ಠವಾಗುತ್ತಿದೆ
- ಹೆಚ್ಚು ವೇಗದ ಹೆಚ್ಚು ಪ್ರಯಾಣಿಕ ರೈಲುಗಳು ಇದೀಗ ಇವೆ.
- ರೈಲ್ವೆ ಇಲಾಖೆಯಲ್ಲಿ ಅಭಿವೃದ್ಧಿ ವೇಗ ಪಡೆದುಕೊಂಡಿದೆ.
- 10 ಪ್ಯಾಸೆಂಜರ್, 4 ಎಂಇಎಂಯು ರೈಲು
- ಬೇಡಿಕೆ ಆಧಾರದಲ್ಲಿ ಎಸಿ ರೈಲಿನಲ್ಲಿ ದರ ನಿರ್ಧಾರ
- ರೈಲು ಪ್ರಾಧಿಕಾರ ಅಸ್ತಿತ್ವಕ್ಕೆ ತರಲು ನಿರ್ಧಾರ
- ರೈಲು ಟಿಕೆಟ್ ದರ ನಿಗದಿಗೊಳಿಸುವುದಕ್ಕಾಗಿ ಪ್ರಾಧಿಕಾರ
- ರೈಲ್ವೇ ಇಲಾಖೆಯಲ್ಲಿ ಬಂಡವಾಳ ಹೂಡಿಕೆ ಅತ್ಯಗತ್ಯ
- ಲೆವೆಲ್ ಕ್ರಾಸಿಂಗ್ ಬಳಿ ಸೇತುವೆ, ಮೇಲ್ಸೇತುವೆ ನಿರ್ಮಾಣ
- 17 ಪ್ರೀಮಿಯಮ್, 38 ಎಕ್ಸ್ಪ್ರೆಸ್ ರೈಲು
- ರೈಲ್ವೇ ಕ್ರಾಸಿಂಗ್ ಬಳಿ 5400 ಸಿಬ್ಬಂದಿ ನಿಯೋಜನೆ
- ಒಟ್ಟು 65 ಹೊಸ ರೈಲುಗಳ ಘೋಷಣೆ
- 3 ಡಿಎಂಯು ರೈಲುಗಳ ಘೋಷಣೆ