ಬಿಲ್ ಪಾವತಿಯಲ್ಲಿ ಶೇ.50ರಷ್ಟು ಕಡಿತ: ದೆಹಲಿ ಸರ್ಕಾರ
ಪ್ರತಿಭಟನೆಗೆ ಬೆಂಬಲಿಸಿ ವಿದ್ಯುತ್ ಬಿಲ್ ಪಾವತಿಸದ ದೆಹಲಿ ಜನತೆಗೆ ಬಿಲ್ ಪಾವತಿಸಲು ಶೇ.50ರಷ್ಟು ವಿನಾಯಿತಿ ನೀಡಲಾಗುವುದು...
ನವದೆಹಲಿ: ಪ್ರತಿಭಟನೆಗೆ ಬೆಂಬಲಿಸಿ ವಿದ್ಯುತ್ ಬಿಲ್ ಪಾವತಿಸದ ದೆಹಲಿ ಜನತೆಗೆ ಬಿಲ್ ಪಾವತಿಸಲು ಶೇ.50ರಷ್ಟು ವಿನಾಯಿತಿ ನೀಡಲಾಗುವುದು ಎಂದು ದೆಹಲಿ ಸರ್ಕಾರ ಬುಧವಾರ ಘೋಷಿಸಿದೆ.
ವಿದ್ಯುತ್ ಬೆಲೆ ಏರಿಕೆ ವಿರೋಧಿಸಿ ಅರವಿಂದ್ ಕೇಜ್ರಿವಾಲ್ ನೈತೃತ್ವದಲ್ಲಿ ನಡೆಸಿದ್ದ ಹೋರಾಟದ ವೇಳೆ ಪ್ರತಿಭಟನೆಗೆ ಬೆಂಬಲಿಸಲೆಂದು ಕೆಲ ದೆಹಲಿ ಜನತೆ ವಿದ್ಯುತ್ ಬಿಲ್ ಪಾವತಿಸಲಿರಲ್ಲಿಲ್ಲ. ಈ ಹಿನ್ನಲೆಯಲ್ಲಿ ದೆಹಲಿ ಜನತೆ ಬಾಕಿ ಉಳಿದಿರುವ ವಿದ್ಯುತ್ ಬಿಲ್ ಪಾವತಿಸಬೇಕಿದೆ. ಆದರೆ ಪ್ರತಿಭಟನೆಗೆ ಬೆಂಬಲಿಸಿದ್ದಾರೆಂಬ ಉದ್ದೇಶದಿಂದ, ವಿದ್ಯುತ್ ಬಿಲ್ ಪಾವತಿಯಲ್ಲಿ ಶೇ.50ರಷ್ಟು ವಿನಾಯಿತಿ ನೀಡಲಾಗುವುದು ಎಂದು ಘೋಷಿಸಿದೆ.
2012 ಅಕ್ಟೋಬರ್ ಮತ್ತು 2013 ಏಪ್ರಿಲ್ ವರೆಗೆ ಬಿಜ್ಲಿ ಸತ್ಯಾಗ್ರಹ ನಡೆಸಲಾಗಿತ್ತು. ಎಎಪಿ ಬೆಂಬಲಿಗರು ಬಿಜ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಸುಮಾರು 24 ಸಾವಿರ ಗ್ರಾಹಕರು ಎಎಪಿ ಸರ್ಕಾರ ಘೋಷಿಸಿರುವ ಪ್ರಯೋಜನ ಪಡೆಯಲಿದ್ದಾರೆ.