ಮೊಯ್ಲಿ, ಮುಖೇಶ್ ಅಂಬಾನಿ ವಿರುದ್ಧ ಎಫ್ಐಆರ್ ದಾಖಲು
ಅನಿಲ ಬೆಲೆ ಏರಿಕೆ ವಿವಾದ...
ನವದೆಹಲಿ: ಅನಿಲ ಬೆಲೆ ಏರಿಕೆ ವಿವಾದ ಸಂಬಂಧಿಸಿದಂತೆ ದೆಹಲಿ ಸರ್ಕಾರದ ಭ್ರಷ್ಟಾಚಾರದ ವಿರೋಧಿ ಇಲಾಖೆ ಬುಧವಾರ ಪ್ರಾಥಮಿಕ ತನಿಖಾ ವರದಿ(ಎಫ್ಐಆರ್) ದಾಖಲಿಸಿದೆ.
ಅನಿಲ ಬೆಲೆ ಏರಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇಂದು ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ, ರಿಲಾಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಅನಿಲ ಬೆಲೆ ಏರಿಕೆಯಲ್ಲಿ ಭ್ರಷ್ಟಾಚಾರವೆಸಗಲಾಗಿದೆ ಎಂದು ಆರೋಪಿಸಿ ಮೊಯ್ಲಿ, ಮುಖೇಶ್ ಅಂಬಾನಿ, ಮುರ್ಲಿ ಡೆಯೋರಾ ಮತ್ತು ನಿವೃತ್ತ ಅಧಿಕಾರಿ ವಿಕೆ ಸಿಬಲ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ನಿನ್ನೆಯಷ್ಟೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಅನಿಲ ಬೆಲೆ ಏರಿಕೆ ಸಂಬಂಧಿಸಿದಂತೆ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ, ರಿಲಾಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ವಿರುದ್ಧ ಎಫ್ಐಆರ್ ದಾಖಲಿಸುತ್ತೇವೆ ಎಂದು ಹೇಳಿದ್ದರು.