ಮೋದಿ 'ಸಾವಿನ ವ್ಯಾಪಾರಿ': ಲಾಲು
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ 'ಸಾವಿನ ವ್ಯಾಪಾರಿ' ಎಂದು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಬುಧವಾರ...
ನವದೆಹಲಿ/ಪಾಟ್ನಾ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ 'ಸಾವಿನ ವ್ಯಾಪಾರಿ' ಎಂದು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಬುಧವಾರ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೋದಿ ಸಾವಿನ ವ್ಯಾಪಾರಿ ಇದ್ದಂತೆ ಎಂದಿರುವ ಮಾಜಿ ಮಂತ್ರಿ ಹಾಗೂ ರಾಷ್ಟ್ರೀಯ ಜನತಾ ದಳದ(ಆರ್ಜೆಡಿ) ಮುಖ್ಯಸ್ಥ ಲಾಲು, ಮೋದಿ ಒಮ್ಮೊಮ್ಮೆ ಏನೇನೋ ಹೇಳುತ್ತಾರೆ, ಒಮ್ಮೊಮ್ಮೆ ಏನೇನೋ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮಾಚ್ 3ರಂದು ನಡೆಯಲಿರುವ ಮೋದಿ ರ್ಯಾಲಿಯ ದಿನದಂದೇ ರ್ಯಾಲಿ ಮಾಡಲು ಅನುಮತಿ ಕೋರಿ ಆರ್ಜೆಡಿ ಪಕ್ಷದ ನಾಯಕ ಲಾಲು ಇಂದು ಬಿಹಾರದ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮೋದಿ ನಡೆಸುವ ರ್ಯಾಲಿಯಂದೆ ರ್ಯಾಲಿ ಹಮ್ಮಿಕೊಳ್ಳಲು ನಿರ್ಧರಿಸಿರುವ ಆರ್ಜೆಡಿ ಪಕ್ಷ ವಿವಾದವನ್ನುಂಟು ಮಾಡಲೆಂದೆ ಹುನ್ನಾರ ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು.
ನಿಯಮದ ಪ್ರಕಾರ ರ್ಯಾಲಿಗೆ ಅನುಮತಿ ಕೋರಿ ಮೊದಲು ಯಾರು ಮನವಿ ಮಾಡಿರಿತ್ತಾರೋ ಅವರನ್ನು ಪರಿಗಣಿಸಬೇಕಿದೆ. ಆದರೆ ನಿತೀಶ್ ಕುಮಾರ್ ಸರ್ಕಾರ ಏನು ಮಾಡುತ್ತದೆ ಎಂಬುದು ಕಾದು ನೋಡಬೇಕಿದೆ ಎಂದು ಬಿಜೆಪಿ ಮುಖಂಡ ಸುಶೀಲ್ ಮೋದಿ ಹೇಳಿದ್ದಾರೆ.