ರಾಜ್ಯ ಸರ್ಕಾರಕ್ಕೆ ಸುಪ್ರೀಂ ತರಾಟೆ
ಭಾಷಾ ಮಾದ್ಯಮ ವಿವಾದ ವಿಚಾರಣೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ...
ನವದೆಹಲಿ: ಭಾಷಾ ಮಾದ್ಯಮ ವಿವಾದ ವಿಚಾರಣೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿದೆ.
ಭಾಷಾ ಮಾಧ್ಯಮ ಆಯ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಮೊದಲು ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಭಾಷಾ ಮಾಧ್ಯಮ ಆಯ್ಕೆ ಮಕ್ಕಳು ಮತ್ತು ಪೋಷಕರಿಗೆ ಬಿಟ್ಟದ್ದು, ಇದರಲ್ಲಿ ಸರ್ಕಾರದ ದಬ್ಬಾಳಿಕೆ ಇರಬಾರದು. ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸ್ವತಂತ್ರವಿದೆ. ಪೋಷಕರು ಮತ್ತು ಮಕ್ಕಳ ಹಕ್ಕಿಗೆ ಧಕ್ಕೆಯಾಗಬಾರದು. ಅವರ ತೀರ್ಮಾನವೇ ಅಂತಿಮ ನಿರ್ಧಾರ ಎಂದು ಕೋಟ್ ಹೇಳಿದೆ.
ದೇಶದಲ್ಲಿ ಎಲ್ಲಾ ರಾಜ್ಯಗಳು ಕಲ್ಯಾಣ ರಾಜ್ಯಗಳೇ, ಆದರೆ ಕಲ್ಯಾಣ ಎಲ್ಲಿದೆ? ಕರ್ನಾಟಕ ಸರ್ಕಾರ ತತ್ವಜ್ಞಾನದ ಮಾತನ್ನಾಡುತ್ತಿದೆ. ಅದಕ್ಕೂ ಮೊದಲು ಕರ್ನಾಟಕ ಸರ್ಕಾರ ಎಷ್ಟು ಆಂಗ್ಲ ಶಾಲೆ ನಡೆಸುತ್ತಿದೆ? ಎಂಬ ಪ್ರಶ್ನೆಗೆ ಉತ್ತರಿಸಲಿ ಎಂದು ಕೋರ್ಟ್ ತಿಳಿಸಿದೆ.
ನ್ಯಾಯಾಲಯದ ಪ್ರಶ್ನೆಗಳಿಗೆ ಮೌನವಹಿಸಿದ ರಾಜ್ಯ ಸರ್ಕಾರ, ವಾದ ಮಂಡನೆ ಮುಕ್ತಾಯಗೊಳಿಸಿದೆ.