ಇಂದಿನ ಗೂಗಲ್ doodle ನೋಡಿದಿರಾ?
ಗೂಗಲ್ doodle ಅಂದರೆ ಗೂಗಲ್ ಪೇಜ್ ತೆರೆದ ಕೂಡಲೇ ನಿಮಗೊಂದು..
ಗೂಗಲ್ doodle ಅಂದರೆ ಗೂಗಲ್ ಪೇಜ್ ತೆರೆದ ಕೂಡಲೇ ನಿಮಗೊಂದು ಚಿತ್ರ ಅಲ್ಲಿ ಕಾಣಿಸುತ್ತದೆ. ಪ್ರತಿ ದಿನ ಅದು ಬದಲಾಗುವುದು ಕೂಡ - ವಿಶೇಷವೆ! ಅಲ್ಲಿ ಕಾಣಿಸುವ ಸೃಜನಶೀಲತೆಯ ಸಾಕ್ಷಿಗಾಗಿ ಇಂದಿನ ಗೂಗಲ್ doodle ನೋಡಿ. ಇಂದು ಭಾರತದ ಕೋಗಿಲೆ ಎಂದು ಖ್ಯಾತರಾದ ಕವಯತ್ರಿ ಸರೋಜಿನಿ ನಾಯ್ಡು ಅವರ ೧೩೫ ನೆ ಹುಟ್ಟುಹಬ್ಬ. ಈ ಚಿತ್ರದಲ್ಲಿ ಗೂಗಲ್ ಎಂಬುದನ್ನು ಇಂಗ್ಲಿಷ್ ನಲ್ಲಿ ಕಲಾತ್ಮಕವಾಗಿ ಬರೆಯಲಾಗಿದೆ ಮತ್ತು ಸರೋಜಿನಿ ನಾಯ್ಡು ಅವರ ಚಿತ್ರ, ಲೇಖನಿಯನ್ನು ಸಾಂಕೇತಿಕವಾಗಿ ತಂದು ಗೂಗಲ್ doodleಮಾಡಲಾಗಿದೆ. ಭಾರತದ ಪ್ರಥಮ ಮಹಿಳಾ ರಾಜ್ಯಪಾಲರು ಎಂಬ ಹೆಗ್ಗಳಿಕೆಯ ಸರೋಜಿನಿ ನಾಯ್ಡು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅತಿಮುಖ್ಯ ಪಾತ್ರ ವಹಿಸಿದ್ದರು. ಅವರ ಹುಟ್ಟುಹಬ್ಬದ ನೆನಪಲ್ಲಿ ಈ ಗೂಗಲ್ doodle ಅರ್ಥಪೂರ್ಣ ಕಾಣಿಕೆ ಅಲ್ಲವೇ?