ಕೇಜ್ರಿವಾಲ್ ಯು ಟರ್ನ್; ಇವತ್ತು ಜನಲೋಕಪಾಲ ಮಸೂದೆ ಮಂಡನೆ ಇಲ್ಲ
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಯು ಟರ್ನ್ ತೆಗೆದುಕೊಂಡಿದೆ. ಗುರುವಾರ ದೆಹಲಿ ...
ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಯು ಟರ್ನ್ ತೆಗೆದುಕೊಂಡಿದೆ. ಗುರುವಾರ ದೆಹಲಿ ವಿಧಾನಸಭೆಯಲ್ಲಿ ಜನಲೋಕಪಾಲ ಮಸೂದೆ ಮಂಡನೆ ಮಾಡುವುದಾಗಿ ಹೇಳಿದ್ದ ಸರ್ಕಾರ, ಇವತ್ತು ಮಸೂದೆ ಮಂಡನೆ ಮಾಡುವುದಿಲ್ಲ ಎಂದು ಹೇಳಿದೆ.
ಮಸೂದೆ ಮಂಡನೆ ಮಾಡುವ ಮುನ್ನ ಅದರ ಪ್ರತಿಗಳನ್ನು ಎಲ್ಲ ಶಾಸಕರಿಗೆ ಹಂಚುವ ಪ್ರಕ್ರಿಯೆಯನ್ನು ಆಪ್ ಮಾಡುತ್ತಿದೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.
ಗುರುವಾರ ಜನಲೋಕಪಾಲ ಮಸೂದೆಯನ್ನು ಮಂಡಿಸುವುದಾಗಿ ಆಪ್ ಸರ್ಕಾರ ಈ ಮೊದಲು ಹೇಳಿಕೆ ನೀಡಿತ್ತು.
ಆದಾಗ್ಯೂ, ಜನಲೋಕಪಾಲ ಮಸೂದೆ ಮಂಡನೆಗೆ ತಾನು ಶತಸಿದ್ಧ ಎಂದು ಹೇಳಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಸೂದೆ ಮಂಡನೆಯಾಗದಿದ್ದರೆ ರಾಜಿನಾಮೆಗೂ ಸಿದ್ಧ ಎಂದಿದ್ದರು.
ಇದೀಗ ಗುರುವಾರ ಮಸೂದೆ ಮಂಡನೆಯಾಗದೇ ಇರುವುದರಿಂದ ಆಪ್ ಸರ್ಕಾರದ ಮುಂದಿನ ನಡೆ ಏನು? ಎಂಬುದರ ಬಗ್ಗೆ ಕಾದು ನೋಡಬೇಕಾಗಿದೆ.