ತೆಲಂಗಾಣ ವಿವಾದ: 18 ಸಂಸದರ ಅಮಾನತು
ತೆಲಂಗಾಣ ಮಸೂದೆ ಮಂಡನೆಗೆ ವಿರೋಧಿಸಿ ಲೋಕಸಭೆಯಲ್ಲಿ ಖಾರದ ಪುಡಿ ಎರಚಿದ ಹಿನ್ನಲೆಯಲ್ಲಿ 18 ಸಂಸದರನ್ನು...
ನವದೆಹಲಿ: ತೆಲಂಗಾಣ ಮಸೂದೆ ಮಂಡನೆಗೆ ವಿರೋಧಿಸಿ ಲೋಕಸಭೆಯಲ್ಲಿ ಖಾರದ ಪುಡಿ ಎರಚಿದ ಹಿನ್ನಲೆಯಲ್ಲಿ 18 ಸಂಸದರನ್ನು ಅಮಾನತುಗೊಳಿಸಲಾಗಿದೆ.
ಗುರುವಾರ ಗೃಹ ಸಚಿವ ಸುಶೀಲ್ ಶಿಂಧೆ ಅವರು ಲೋಕಸಭೆಯಲ್ಲಿ ತೆಲಂಗಾಣ ಮಸೂದೆ ಮಂಡನೆಗೆ ಮುಂದಾದಾಗ ವಿಜಯ್ವಾಡಾದ ಕಾಂಗ್ರೆಸ್ ಸಂಸದ ಎಲ್ ರಾಜಗೋಪಾಲ್ ಕರಿಮೆಣಸು ಪುಡಿ ಎರಚುವ ಮೂಲಕ ಲೋಕಸಭಾ ಕಲಾಪಕ್ಕೆ ಧಕ್ಕೆಯನ್ನುಂಟು ಮಾಡಿದ್ದಾರೆ.
ಪೆಪ್ಪರ್ ಸ್ಪ್ರೇ ಬಳಸಿದ ಕಾರಣ ಸಂಸದರು ಕೆಮ್ಮುತ್ತಾ, ತಮ್ಮ ಕಣ್ಣುಗಳನ್ನು ಕರವಸ್ತ್ರದಿಂದ ಮುಚ್ಚುವ ದೃಶ್ಯ ಲೋಕಸಭೆಯಲ್ಲಿ ಕಂಡು ಬಂದಿದೆ. ಈ ಸಂದರ್ಭದಲ್ಲಿ ನೂಕುನುಗ್ಗಲು ಸಂಭವಿಸಿತ್ತು. ಇಷ್ಟೆಲ್ಲಾ ಸಮಸ್ಯೆಗಳಿಗೆ ಸೀಮಾಂಧ್ರದ ಸಂಸದರೇ ಕಾರಣ ಎಂಬ ಹಿನ್ನಲೆಯಲ್ಲಿ ಸಂಸದ ಎಲ್ ರಾಜಗೋಪಾಲ್ ಸೇರಿದಂತೆ 17 ಸಂಸದರನ್ನು ಲೋಕಸಭಾದಿಂದ ಅಮಾನತುಗೊಳಿಸಲಾಗಿದೆ.
ಇದೇ ವೇಳೆ ಟಿಡಿಪಿ ಸಂಸದ ಕೆ ನಾರಾಯಣ ರಾವ್ ಅವರಿಗೆ ಹೃದಯಾಘಾತವಾದ ಹಿನ್ನಲೆಯಲ್ಲಿ ಅವರನ್ನು ಕೂಡಲೇ ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.