ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿ ಭೇಟಿ ಮಾಡಿದ ನ್ಯಾನ್ಸಿ ಪೊವೇಲ್, ನಿಲುವು ಬದಲಿಸಿದ ಅಮೆರಿಕ?

ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿಚಾರದಲ್ಲಿ ಅಮೆರಿಕ ತನ್ನ ನಿಲುವು ಬದಲಿಸುವ ಸೂಚನೆ..

Lingaraj Badiger
Updated On : 13 Feb 2014, 12:15 pm

ಗಾಂಧಿನಗರ: ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿಚಾರದಲ್ಲಿ ಅಮೆರಿಕ ತನ್ನ ನಿಲುವು ಬದಲಿಸುವ ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಭಾರತದಲ್ಲಿರುವ ಅಮೆರಿಕ ರಾಯಭಾರಿ ನ್ಯಾನ್ಸಿ ಪೊವೇಲ್ ಅವರು ಗುರುವಾರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.

ಪೊವೇಲ್ ಅವರು ಇಂದು ಬೆಳಗ್ಗೆ ಗಾಂಧಿನಗರದಲ್ಲಿ ಮೋದಿ ಅವರ ನಿವಾಸಕ್ಕೆ ತೆರಳಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದು, ಮಾತುಕತೆಯ ವಿವರ ಇನ್ನು ಬಹಿರಂಗವಾಗಿಲ್ಲ. 2002ರ ಗುಜರಾತ್ ಗಲಭೆ ಹಿನ್ನೆಲ್ಲೆಯಲ್ಲಿ ಮೋದಿಗೆ ವೀಸಾ ನೀಡಲು ನಿರಾಕರಿಸಿದ್ದ ಅಮೆರಿಕ, ಇದೀಗ ತನ್ನ ಬಹಿಷ್ಕಾರ ಅಂತ್ಯಗೊಳಿಸುವ ಸೂಚನೆ ನೀಡಿದೆ ಎನ್ನಲಾಗುತ್ತಿದೆ.

2005ರಲ್ಲಿ ಅಮೆರಿಕ ಮೋದಿಗೆ ವೀಸಾ ನೀಡಲು ನಿರಾಕರಿಸಿದ ನಂತರ ಮೊದಲ ಬಾರಿಗೆ ಅಮೆರಿಕದ ಉನ್ನತ ಮಟ್ಟದ ಅಧಿಕಾರಿಯೊಬ್ಬರು ಗುಜರಾತ್ ಮುಖ್ಯಮಂತ್ರಿಯನ್ನು ಭೇಟಿ ಮಾಡಿ, ಚರ್ಚಿಸಿದ್ದಾರೆ.

ಈ ಮಧ್ಯೆ, ವೈಯಕ್ತಿಕ ವಿಚಾರಗಳು ವೀಸಾಕ್ಕೆ ಅನ್ವಯವಾಗುವುದಿಲ್ಲ. ಅಮೆರಿಕದ ಕಾನೂನಿನ ಪ್ರಕಾರ ಅವರ ವೀಸಾವನ್ನು ಮರು ಪರಿಶೀಲನೆ ನಡೆಸಲಾಗುವುದು. ಆದರೆ ಪೊವೇಲ್ ಅವರ ಭೇಟಿ ವೀಸಾ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಮೆರಿಕ ರಾಯಭಾರ ಕಚೇರಿಯ ವಕ್ತಾರರು ಮಾಧ್ಯಮಕ್ಕೆ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement