ಸಂಸತ್ತಿನಲ್ಲಿ ತೆಲಂಗಾಣ ಮಸೂದೆ ಮಂಡನೆಯೇ ಆಗಿಲ್ಲ: ಸುಷ್ಮಾ
ಸಂಸತ್ತಿನಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ಮಸೂದೆ ಮಂಡನೆಯಾಗಿಲ್ಲ ಎಂದು ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್..
ನವದೆಹಲಿ: ಸಂಸತ್ತಿನಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯ ಮಸೂದೆ ಮಂಡನೆಯಾಗಿಲ್ಲ ಎಂದು ಲೋಕಸಭೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು ಗುರುವಾರ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಷ್ಮಾ ಸ್ವರಾಜ್ ಅವರು, ಕೇಂದ್ರ ಸರ್ಕಾರ ತೆಲಂಗಾಣ ಮಸೂದೆ ಮಂಡಿಸಲಾಗಿದೆ ಎಂದು ಹೇಳುತ್ತಿದೆ. ಆದರೆ ನಾನು ಸದನದಲ್ಲಿ ಇರುವಷ್ಟು ಹೊತ್ತೂ ಮಸೂದೆ ಮಂಡನೆಯಾಗಿಲ್ಲ. ಮಸೂದೆ ಯಾವಾಗ ಮಂಡನೆ ಆಯ್ತೋ ನನಗಂತೂ ಗೊತ್ತಿಲ್ಲ ಎಂದಿದ್ದಾರೆ.
ಮಸೂದೆ ಮಂಡನೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪ್ರತಿಪಕ್ಷ ನಾಯಕಿ, ಈ ಬಗ್ಗೆ ತಾವು ಎಂದಿಗೂ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೀಮಾಂಧ್ರ ಸಂಸದರ ತೀವ್ರ ಗದ್ದಲದ ನಡುವೆಯೂ ಇಂದು ಬೆಳಗ್ಗೆ ಕೇಂದ್ರ ಗೃಹ ಸುಶೀಲ್ ಕುಮಾರ್ ಶಿಂಧೆ ಅವರು ಲೋಕಸಭೆಯಲ್ಲಿ ತೆಲಂಗಾಣ ಮಸೂದೆಯನ್ನು ಮಂಡಿಸಿದ್ದರು.