ಸುಂಕ ನಿಯಮದಲ್ಲಿ ಬದಲಾವಣೆಗೆ ಸಮ್ಮತಿಸಿದ ಚವ್ಹಾಣ್
ಸುಂಕ ವಸೂಲಾತಿಯಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿ ರಾಜ್ ಚವ್ಹಾಣ್ ಅವರು...
ಮುಂಬೈ: ಸುಂಕ ವಸೂಲಾತಿಯಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವಿ ರಾಜ್ ಚವ್ಹಾಣ್ ಅವರು ಗುರುವಾರ ಭರವಸೆ ನೀಡಿದ್ದಾರೆ.
ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ಅವರು ಸಿಎಂ ಚವ್ಹಾಣ್ ಅವರನ್ನು ಭೇಟಿ ಮಾಡಿ, ಸುಂಕ ವಸೂಲಾತಿ ನಿಯಮದಲ್ಲಿ ಬದಲಾವಣೆ ಕುರಿತು ಇಂದು ಚರ್ಚಿಸಿದ್ದಾರೆ.
ಸುಂಕ ವಸೂಲಾತಿಯಲ್ಲಿ ಬದಲಾವಣೆ ಮಾಡಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ ಎಂದು ಠಾಕ್ರೆ ಹೇಳಿದ್ದಾರೆ.
ಸುಂಕ ವಸೂಲಾತಿ ಖಂಡಿಸಿ ರಸ್ತೆ ತಡೆ ಮಾಡಿ, ಪ್ರತಿಭಟನೆ ನಡೆಸಲಾಗುತ್ತಿತ್ತು. ಈ ವೇಳೆ ರಾಜ್ ಠಾಕ್ರೆ ಅವರನ್ನು ಪೊಲೀಸರು ಬಂಧಿಸಿದ್ದರು. ಪ್ರತಿಭಟನೆ ತ್ರೀವ್ರಗೊಂಡ ಹಿನ್ನಲೆಯಲ್ಲಿ, ರಾಜ್ ಠಾಕ್ರೆ ಅವರನ್ನು ನಿನ್ನೆ ಬಂಧನದಿಂದ ಮುಕ್ತಗೊಳಿಸಲಾಯಿತು. ಬಿಡುಗಡೆಗೊಂಡ ಠಾಕ್ರೆ, ಸಿಎಂ ಅವರನ್ನು ಭೇಟಿ ಮಾಡಿ, ತಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.