ಅರವಿಂದ್ ಕೇಜ್ರಿವಾಲ್ ರಾಜಿನಾಮೆ ಸಾಧ್ಯತೆ
ಜನಲೋಕಪಾಲ ಮಸೂದೆ ಮಂಡನೆಯಾಗದಿದ್ದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಜಿನಾಮೆ...
ನವದೆಹಲಿ: ಜನಲೋಕಪಾಲ ಮಸೂದೆ ಮಂಡನೆಯಾಗದಿದ್ದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಜಿನಾಮೆ ನೀಡುವ ಸಾಧ್ಯತೆ ಇದೆ.
ಇಂದು ದೆಹಲಿ ವಿಧಾನಸಭೆಯಲ್ಲಿ ಜನಲೋಕಪಾಲ್ ಮಸೂದೆಯನ್ನು ಕೇಜ್ರಿವಾಲ್ ಮಂಡಿಸಿದರು. ಆದರೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮಸೂದೆ ಮೇಲಿನ ಚರ್ಚೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಗದ್ದಲು ಉಂಟು ಮಾಡಿದವು.
ಇದರಿಂದ ಸ್ಪೀಕರ್ ಅವರು ವಿಧೇಯಕ ಮಂಡನೆಯನ್ನು ಮತಕ್ಕೆ ಹಾಕಿದರು. ವಿಧೇಯಕ ಮಂಡನೆ ಪರವಾಗಿ 27 ಮತಗಳು ಹಾಗೂ ವಿಧೇಯಕ ಮಂಡನೆ ವಿರುದ್ಧವಾಗಿ 42 ಮತಗಳು ಬಿದ್ದಿವೆ. ಹೀಗಾಗಿ ವಿಧಾನಸಭೆಯಲ್ಲಿ ಜನಲೋಕಪಾಲ್ ಸೋಲು ಅನುಭವಿಸಿದೆ.
ಇದಕ್ಕೆ ಕೇಜ್ರಿವಾಲ್ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜಿನಾಮೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಎಎಪಿ ಮುಖಂಡರು ಕೇಜ್ರಿವಾಲ್ ರಾಜಿನಾಮೆ ನೀಡಬಾರದು, ಅವರಿಲ್ಲದೇ ಆಡಳಿತ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.