ಎಲೆಕ್ಟ್ರಾನಿಕ್ ಆಮದು ಅವಲಂಬನೆ ಕಡಿತಗೊಳಿಸಬೇಕು: ಮೋದಿ
ಮುಂಬೈ: ವಿದೇಶಗಳಿಂದ ಎಲೆಕ್ಟ್ರಾನಿಕ್ ವಸ್ತುಗಳನ್ನು ಆಮದು ಮಾಡಿಕೊಳ್ಳವುದರ ಮೂಲಕ ವಿದೇಶಗಳ ಮೇಲೆ ಅವಲಂಬನೆ ಹೆಚ್ಚಾಗಿದ್ದು, ಇದನ್ನು ಕಡಿಮೆ ಮಾಡಬೇಕಾಗಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.
ಎಲೆಕ್ಟ್ರಾನಿಕ್ ವಸ್ತುಗಳ ಆಮದಿಗಾಗಿ ವಿದೇಶಗಳ ಅವಲಂಬನೆ ಹೆಚ್ಚಾಗಿದೆ. ಇದನ್ನು ಕಡಿಮೆ ಮಾಡುವ ಅಗತ್ಯವಿದೆ. ನಮ್ಮ ದೇಶದಲ್ಲಿ ಹೆಚ್ಚಾಗಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಉತ್ಪಾದಿಸುವಂತೆ ಮಾಡಬೇಕು ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಹಾರ್ಡವೇರ್ ಮತ್ತು ಸಾಫ್ಟ್‌ವೇರ್ ಬಳೆಕೆ ಸ್ವದೇಶದ್ದಾಗಿರಬೇಕು. ಆದಷ್ಟು ವಿದೇಶದಿಂದ ಎಲೆಕ್ಟ್ರಾನಿಕ್ ವಸ್ತುಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಸ್ವದೇಶದಲ್ಲೇ ಇದರ ಉತ್ಪಾದನೆಗಾಗಿ ಒತ್ತು ನೀಡಬೇಕು. ಇದರಿಂದ ಆರ್ಥಿಕತೆ ಬೆಳವಣಿಗೆ ಸಾಧ್ಯ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.