ಕೇಜ್ರಿವಾಲ್ ಸುಳ್ಳುಗಾರ: ಹರ್ಷವರ್ಧನ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸುಳ್ಳುಗಾರ ಎಂದು ವಿಪಕ್ಷ ನಾಯಕ ಹರ್ಷವರ್ಧನ್ ಹೇಳಿದ್ದಾರೆ...
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸುಳ್ಳುಗಾರ ಎಂದು ವಿಪಕ್ಷ ನಾಯಕ ಹರ್ಷವರ್ಧನ್ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಸುದ್ದಿಗೊಷ್ಟಿ ನಡೆಸಿದ ಅವರು, ಕೇಜ್ರಿವಾಲ್ ಮಹಾನ್ ಸುಳ್ಳುಗಾರ, ಜನರ ಗಮನ ಬೇರೆಡೆ ಸೆಳೆಯಲು ಬಿಜೆಪಿ ಪಕ್ಷದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮುಖೇಶ್ ಅಂಬಾನಿಗೆ ಯಾರಿಂದ ಲಾಭ ವಾಗುತ್ತಿದೆ. ಅಂಬಾನಿಗೆ ಯಾರು ಲಾಭ ತಂದುಕೊಡುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಬಿಜೆಪಿ ಮೇಲೆ ಸುಳ್ಳು ಆರೋಪ ಮಾಡುವುದನ್ನು ಕೇಜ್ರಿವಾಲ್ ನಿಲ್ಲಿಸಲಿ. ಬಿಜೆಪಿ ಜನಲೋಕಪಾಲ ವಿರೋಧಿಯಲ್ಲ, ಜನಲೋಕಪಾಲ ಮಸೂದೆ ಜಾರಿಗೆ ಬಿಜೆಪಿ ಬೆಂಬಲಿಸಿದೆ ಎಂದು ಅವರು ಹೇಳಿದ್ದಾರೆ.