ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜನಲೋಕಪಾಲ ಮಸೂದೆ ವಿವಾದ: ಉಪರಾಜ್ಯಪಾಲರ ಪತ್ರ ತಿರಸ್ಕರಿಸಿದ ಸ್ಪೀಕರ್

ಜನಲೋಕಪಾಲ ಮಸೂದೆ ಮಂಡನೆ ಕುರಿತಂತೆ ದೆಹಲಿಯ ಉಪರಾಜ್ಯಪಾಲರು ಬರೆದಂತ ಪತ್ರವನ್ನು ಓದಲು ಲೋಕಸಭಾ ಸ್ಪೀಕರ್...

Mainashree
Updated On : 14 Feb 2014, 3:36 am

ನವದೆಹಲಿ: ಜನಲೋಕಪಾಲ ಮಸೂದೆ ಮಂಡನೆ ಕುರಿತಂತೆ ದೆಹಲಿಯ ಉಪರಾಜ್ಯಪಾಲರು ಬರೆದಂತ ಪತ್ರವನ್ನು ಓದಲು ಲೋಕಸಭಾ ಸ್ಪೀಕರ್ ನಿರಾಕರಿಸಿದ್ದಾರೆ.

ಜನಲೋಕಪಾಲ್ ಮಸೂದೆ ಅಸಂವಿಧಾನಿಕವಾಗಿದ್ದು, ವಿಧಾನಸಭೆಯಲ್ಲಿ ಮಸೂದೆ ಮಂಡಿಸುವುದು ಬೇಡ ಮತ್ತು ನನ್ನ ಅನುಮತಿ ಇಲ್ಲದೆ ಭ್ರಷ್ಟಾಚಾರ ವಿರೋಧಿ ಮಸೂದೆ ಮಂಡನೆ ಸಾಧ್ಯವಿಲ್ಲ ಎಂದು ಉಪರಾಜ್ಯಪಾಲ ನಜೀಬ್ ಜಂಗ್ ಅವರು ಸ್ಪೀಕರ್‌ಗೆ ಪತ್ರ ಬರೆದಿದ್ದರು.

ಈ ಪತ್ರವನ್ನು ಅಧಿವೇಶನದಲ್ಲಿ ಓದುವಂತೆ ವಿರೋಧ ಪಕ್ಷಗಳು ಒತ್ತಡ ಹೇರಿದವು. ಆದರೆ ಸ್ಪೀಕರ್ ಪತ್ರವನ್ನು ಓದಲು ನಿರಾಕರಿಸಿದ್ದು, ಈ ಪತ್ರಕ್ಕೆ ಸ್ಪಷ್ಟನೆ ನೀಡುವಂತೆ ಎಲ್ಲಾ ಪಕ್ಷಗಳನ್ನು ಸಭೆಗೆ ಕರೆದಿದ್ದಾರೆ ಎಂದು ತಿಳಿದು ಬಂದಿದೆ.

ಆಮ್ ಆದ್ಮಿ ಪಕ್ಷ ಶುಕ್ರವಾರ ಜನಲೋಕಪಾಲ್ ಮಸೂದೆ ಮಂಡಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ ಬೆನ್ನಲ್ಲೆ ನಜೀಬ್ ಜಂಗ್ ಅವರು ಈ ಹೇಳಿಕೆ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement