ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದು...
2014-15ನೇ ಸಾಲಿನಲ್ಲಿ ಬಿಡಿಎನಿಂದ 8 ಸಾವಿರ ಫ್ಲಾಟ್ ಗಳ ನಿರ್ಮಾಣ, ಕೆಂಪೇಗೌಡ ಲೇಔಟ್ ನಲ್ಲಿ 5000 ನಿವೇಶನ..
- 250 ಕೋಟಿ ರು. ವೆಚ್ಚದಲ್ಲಿ ನಗರಸಭೆ, ಪುರಸಭೆ ಅಭಿವೃದ್ಧಿ
- 200 ಕೋಟಿ ವೆಚ್ಚದಲ್ಲಿ ರೇಲ್ವೆ ಕ್ರಾಸಿಂಗ್ ಬಳಿ ಸೇತುವೆ
- 39 ಕೆರೆಗಳ ಪುನಶ್ಚೇತನಕ್ಕೆ ಕ್ರಮ
- 10 ಕೋಟಿ ರು. ವೆಚ್ಚದಲ್ಲಿ 54 ಕೆರೆಗಳಿಗೆ ತಂತಿಬೇಲಿ
- 2014-15ನೇ ಸಾಲಿನಲ್ಲಿ ಬಿಡಿಎನಿಂದ 8 ಸಾವಿರ ಫ್ಲಾಟ್ ಗಳ ನಿರ್ಮಾಣ
- ಗ್ರೇಡ್ ಸಪರೇಟರ್ ನಿರ್ಮಾಣ ಕಾಮಗಾರಿಗೆ 200 ಕೋಟಿ
- ಘನತ್ಯಾಜ್ಯ ವಿಲೇವಾರಿ ಸಂಸ್ಕರಣೆಗೆ 100 ಕೋಟಿ ಅನುದಾನ
- ಹೊಸ ಪಾರ್ಕಿಂಗ್ ನೀತಿ ಅನುಷ್ಠಾನಕ್ಕೆ 10 ಕೋಟಿ
- 300 ಕೋಟಿ ರು. ವೆಚ್ಚದಲ್ಲಿ 12 ಪ್ರಮುಖ ರಸ್ತೆಗಳ ಅಭಿವೃದ್ಧಿ
- 100 ಕೋಟಿ ವೆಚ್ಚದಲ್ಲಿ ಪಾದಚಾರಿ ಮಾರ್ಗ ಅಭಿವೃದ್ಧಿ
- ಮಹಾರಾಣಿ ವಾಣಿಜ್ಯ ಮತ್ತು ಎಂಬಿಎ ಕಾಲೇಜು ಹಾಗೂ ಹಾಸ್ಟೆಲ್ ಸ್ಥಾಪನೆ
- ದೇವನಹಳ್ಳಿಯಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆ
- ಬಿಬಿಎಂಪಿ ವಲಯದ 110 ಹಳ್ಳಿಗಳಿಗೆ ಕುಡಿಯುವ ನೀರು
- ಜಕ್ಕೂರು ವಿಮಾನ ನಿಲ್ದಾಣಕ್ಕೆ 2 ಕೋಟಿ ರು. ಅನುದಾನ
- ನಮ್ಮ ಮೆಟ್ರೋ ಎರಡನೇ ಹಂತಕ್ಕಾಗಿ 24,000 ಕೋಟಿ ರು ನೀಡಿಕೆ
- ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ಮಾಣ
- ಚಾಲುಕ್ಯ ಸರ್ಕಲ್ ನಿಂದ ಹೆಬ್ಬಾಳ ಜಂಕ್ಷನ್ ತನಕ ಎಲಿವೇಟೆಡ್ ಕಾರಿಡಾರ್
- ಕೆಂಪೇಗೌಡ ಲೇಔಟ್ ನಲ್ಲಿ 5000 ನಿವೇಶನಕ್ಕಾಗಿ ಮಾರ್ಚ್ ನಿಂದ ಅರ್ಜಿ ಆಹ್ವಾನ
- ಫೆರಿಫೆರಲ್ ರಸ್ತೆ ನಿರ್ಮಾಣಕ್ಕೆ ಜಪಾನ್ನ ಜೈಕಾ ಸಾಲ - 5800 ಕೋಟಿ
- ಫೆರಿಫೆರಲ್ ರಸ್ತೆ ನಿರ್ಮಾಣಕ್ಕೆ ಜಪಾನ್ನ ಜೈಕಾ ಸಾಲ - 5800 ಕೋಟಿ
- ನರ್ಮ್ ಯೋಜನೆಯಡಿ ಗೊರಗುಂಟೆ ಪಾಳ್ಯದ ಕೆಳಸೇತುವೆ ನಿರ್ಮಾನಕ್ಕೆ 125 ಕೋಟಿ
- ಬಸವೇಶ್ವರ ವೃತ್ತದಿಂದ ಹೆಬ್ಬಾಳ ಜಂಕ್ಷನ್ವರೆಗೆ ಮೇಲ್ಮಟ್ಟದ ರಸ್ತೆಗೆ 1100 ಕೋಟಿ
- ನಗರದ 74 ಕಿ.ಮೀ. ಒಳಚರಂಡಿ ಕೊಳವೆ ಮಾರ್ಗಗಳ ಪುನರುಜ್ಜೀವನ ಕಾಮಗಾರಿ
- ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣ ಸಾಮರ್ಥ್ಯ ಹೆಚ್ಚಳ [180 ರಿಂದ 300 ದಶಲಕ್ಷ ಲೀ]
- ಪೀಣ್ಯ-ಸಂಪಿಗೆ ರಸ್ತೆ ಮೆಟ್ರೋ ಶೀಘ್ರವೆ ಸಾರ್ವಜನಿಕ ಸೇವೆಗೆ