ರಾಜ್ಯ ಬಜೆಟ್ : ಕೃಷಿ, ತೋಟಗಾರಿಕೆ ಇಲಾಖೆಗೆ 5,397 ಕೋಟಿ
ರಾಜ್ಯದಲ್ಲಿ 131 ಲಕ್ಷ ಟನ್ ಆಹಾರ ಉತ್ಪಾದನೆ ನಿರೀಕ್ಷೆ, ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 70.35 ಲಕ್ಷ ಹೆಕ್ಟೇರ್ ವಿಸ್ತ್ರೀರ್ಣದಲ್ಲಿ ...
- ರಾಜ್ಯದಲ್ಲಿ 131 ಲಕ್ಷ ಟನ್ ಆಹಾರ ಉತ್ಪಾದನೆ ನಿರೀಕ್ಷೆ
- ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 70.35 ಲಕ್ಷ ಹೆಕ್ಟೇರ್ ವಿಸ್ತ್ರೀರ್ಣದಲ್ಲಿ ಬಿತ್ತನೆ
- 2013 ಮುಂಗಾರು ಹಂಗಾಮಿನಲ್ಲಿ 4.83 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ 17 ಲಕ್ಷ ರೈತರಿಗೆ ವಿತರಣೆ
- ಹಿಂಗಾರು/ ಬೇಸಿಗೆ ಹಂಗಾಮಿನಲ್ಲಿ ವಿತರಿಸಲು 5.26 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ
- ಕೃಷಿ ಯಾಂತ್ರೀಕರಣಕ್ಕೆ ಹಾಗು ಕೃಷಿ ಉತ್ಪನ್ನಗಳ ಸಂಸ್ಕರಣೆಗೆ ಹೆಚ್ಚಿನ ಆದ್ಯತೆ. 50 ಸಾವಿರ ವಿವಿಧ ಕೃಷಿ ಯಂತ್ರೋಪಕರಣಗಳ ವಿತರಣೆ
- ಕೃಷಿ ಉತ್ಪನ್ನಗಳ ಬೆಲೆಗಳನ್ನು ನಿಗದಿಪಡಿಸಲು ರಾಜ್ಯಮಟ್ಟದಲ್ಲಿ ಕೃಷಿ ಬೆಲೆ ಆಯೋಗ ರಚಿಸಲು ಆದೇಶ ಹೊರಡಿಸಲಾಗಿದೆ
- ಕೃಷಿ ಭಾಗ್ಯ ಯೋಜನೆ ಜಾರಿಗೆ ತರಲು ಉದ್ದೇಶ
- ಕೃಷಿ ಭಾಗ್ಯ ಅನುಷ್ಠಾನವನ್ನು ಮಿಷನ್ ಮೋಡ್ ಮಾದರಿಯಲ್ಲಿ ಹಂತ ಹಂತವಾಗಿ 5 ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು
- 2014-15 ನೇ ಸಾಲಿನಲ್ಲಿ ಕೃಷಿ ಇಲಾಖೆಯ ಕಾರ್ಯಕ್ರಮಗಳಿಗಾಗಿ ಒಟ್ಟಾರೆ 3759 ಕೋಟಿ ರು.ಗಳನ್ನು ಒದಗಿಸಲಾಗಿದೆ.
- 2014-15 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ಕಾರ್ಯಕ್ರಮಗಳಿಗಾಗಿ ಒಟ್ಟಾರೆ 1434 ಕೋಟಿ ರು.ಗಳನ್ನು ಒದಗಿಸಲಾಗಿದೆ.