ವಾರ್ತಾ ಇಲಾಖೆಗೆ 92 ಕೋಟಿ ಅನುದಾನ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 9ನೇ ಬಜೆಟ್ನಲ್ಲಿ ವಾರ್ತಾ ಇಲಾಖೆಗೆ ಒಟ್ಟು 92 ಕೋಟಿ ರುಪಾಯಿ ಅನುದಾನ ನೀಡಿದ್ದಾರೆ.
- ಚಲನಚಿತ್ರ ವಸ್ತು ಸಂಗ್ರಹಾಲಯಕ್ಕೆ 10 ಕೋಟಿ ರುಪಾಯಿ
- ನಂದಿನಿ ಬಡಾವಣೆಯಲ್ಲಿ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರ ನಿರ್ಮಾಣ
- ಅಂತರಾಷ್ಟ್ರೀಯ ಚಿತ್ರೋದ್ಯಮ ಸಂಸ್ಥೆಯ ಸಹಭಾಗಿತ್ವದಲ್ಲಿ ಹೆಸರುಗಟ್ಟದಲ್ಲಿ ಚಿತ್ರನಗರಿ ನಿರ್ಮಾಣ
- ಕನ್ನಡ ಚಲನಚಿತ್ರಗಳ ಪ್ರದರ್ಶನಕ್ಕೆ ಜನತಾ ಚಿತ್ರಮಂದಿರಕ್ಕೆ ಪ್ರೋತ್ಸಾಹ
- ಕಿರುಚಿತ್ರ ಉತ್ತೇಜನಕ್ಕಾಗಿ ಪ್ರತಿ ವರ್ಷ ಒಂದು ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ
- ಆಸಕ್ತ ಉದ್ಯಮಿಗಳಿಗೆ ಸರ್ಕಾರದಿಂದ ಉತ್ತೇಜನ ನೀಡಲು ನಿರ್ಧಾರ
- ಕಾರ್ಯನಿರತ ಪತ್ರಕರ್ತರಿಗೆ ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ವಿಮೆ
- ನಿವೃತ್ತ ಪತ್ರಕರ್ತರ ಪಿಂಚಣಿ ಮೊತ್ತ ಹೆಚ್ಚಳ
- ಮಾಧ್ಯಮ ಕೇಂದ್ರ ಸ್ಥಾಪನೆಗಾಗಿ 5 ಕೋಟಿ ವಿನಿಯೋಗ